ನ್ಯೂಯಾರ್ಕ್: ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಅವರಂಥ ನಾಯಕರು ಪ್ರಜಾಪ್ರಭುತ್ವ ಹಾಗೂ ಅಹಿಂಸೆ ವಿಚಾರದಲ್ಲಿ ಡಾ. ಮಾರ್ಟಿನ್ ಲೂಥರ್ ಕಿಂಗ್ ಸೇರಿದಂತೆ ಇತರರಿಗೆ ಸ್ಫೂರ್ತಿಯಾಗಿದ್ದರು ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೋಚುಲ್ ಹೇಳಿದ್ದಾರೆ.

ಒಳಗೊಳ್ಳುವಿಕೆ, ಬಹುತ್ವ, ಸಮಾನತೆ, ವಾಕ್ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಮೌಲ್ಯಗಳು ಭಾರತ ಮತ್ತು ಅಮೆರಿಕವನ್ನು ಬೆಸೆದಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ‘ಕ್ವೀನ್ಸ್ ಮ್ಯೂಸಿಯಂ’ನಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಭಾರತೀಯ ಅಮೆರಿಕನ್ ಸಮುದಾಯದವರನ್ನು ಉದ್ದೇಶಿಸಿ ಅವರು ಮಾತನಾಡಿದರು.

Explainer: ಸ್ವಾತಂತ್ರ್ಯ ದಿನ ಮನೆಯಲ್ಲಿ ಹಾರಿಸಿದ ಧ್ವಜವನ್ನು ಮಡಚಿಡುವುದು ಹೇಗೆ?

‘ಭಾರತವು ವಸಾಹತುಶಾಹಿ ಹಿಡಿತದಿಂದ ಮುಕ್ತಗೊಂಡು 75 ವರ್ಷಗಳಾಗಿವೆ. ವಸಾಹತುಶಾಹಿಯಿಂದ ಬಿಡುಗಡೆಗೊಂಡ ಕಾರಣ ಅಲ್ಲಿನ ಜನರು ನಿಜವಾದ ಪ್ರಜಾಪ್ರಭುತ್ವದ ಹಾದಿಯಲ್ಲಿ ಹೆಜ್ಜೆ ಹಾಕುವುದು ಸಾಧ್ಯವಾಯಿತು’ ಎಂದು ಹೋಚುಲ್ ಹೇಳಿದ್ದಾರೆ.

ವಸಾಹತುಶಾಹಿ ಆಡಳಿತವನ್ನು ತಿರಸ್ಕರಿಸುವ ವಿಚಾರದಲ್ಲಿ ಭಾರತದ್ದೇ ನಿಲುವು ಅಮೆರಿಕದ್ದೂ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಅಮೆರಿಕ, ಚೀನಾ ಸೇರಿದಂತೆ ವಿಶ್ವದ ಹಲವೆಡೆ ಸೋಮವಾರ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಅಮೆರಿಕದ ಬೋಸ್ಟನ್‌ನಲ್ಲಿ ಇದೇ ಮೊದಲ ಬಾರಿಗೆ ನಡೆದ ಇಂಡಿಯಾ ಡೇ ಪರೇಡ್ ಹಾಗೂ 220 ಅಡಿ ಎತ್ತರದಲ್ಲಿ ಹಾರಿಸಿದ ಭಾರತದ ತ್ರಿವರ್ಣ ಧ್ವಜ ಮತ್ತು ಅಮೆರಿಕದ ಧ್ವಜಗಳು ಎಲ್ಲರ ಗಮನ ಸೆಳೆದಿದ್ದವು.

ಅಮೆರಿಕ, ಚೀನಾ ಸೇರಿದಂತೆ ವಿಶ್ವದ ಹಲವೆಡೆ ಸ್ವಾತಂತ್ರ್ಯೋತ್ಸವದ ಅದ್ಧೂರಿ ಆಚರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.