ಬೆಂಗಳೂರು: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಇಸ್ಲಾಂ ಮೂಲಭೂತವಾದಿಗಳ ತಾಯಿಯಾಗಿದ್ದಾರೆ. ಬಾಂಗ್ಲಾದೇಶವೂ ಇಸ್ಲಾಮಿಕ್ ರಾಷ್ಟ್ರವಾಗುತ್ತಿದೆ ಎಂದು ಖ್ಯಾತ ಲೇಖಕಿ ತಸ್ಲಿಮಾ ನಸ್ರೀನ್ ಕಳವಳ ವ್ಯಕ್ತಪಡಿಸಿದ್ದಾರೆ.

ವಿಜ್ಞಾನ ತರಗತಿಯಲ್ಲಿ ಇಸ್ಲಾಂ ಧರ್ಮಕ್ಕೆ ಮತ್ತು ಪ್ರವಾದಿ ಮುಹಮ್ಮೊದ್ ಅವರಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಶಿಕ್ಷಕರೊಬ್ಬರನ್ನು ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿ ತಸ್ಲಿಮಾ ನಸ್ರೀನ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

'ಕುರಾನ್ ವೈಜ್ಞಾನಿಕ ತಳಹದಿಯದ್ದಾಗಿದೆ ಮತ್ತು ಮುಹಮ್ಮದ್ ವಿಶ್ವದ ದೊಡ್ಡ ವಿಜ್ಞಾನಿ ಎಂಬುದನ್ನು ಒಪ್ಪಿಕೊಳ್ಳದ ವಿಜ್ಞಾನ ಶಿಕ್ಷಕನನ್ನು ಬಾಂಗ್ಲಾದೇಶದಲ್ಲಿ ಜೈಲಿಗೆ ಕಳುಹಿಸಲಾಗಿದೆ. ಬಾಂಗ್ಲಾದೇಶವು ಇಸ್ಲಾಮಿಕ್ ರಾಷ್ಟ್ರವಾಗುತ್ತಿದೆ. ಎಲ್ಲಾ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಹಸೀನಾ ತಾಯಿಯಾಗಿದ್ದಾರೆ' ಎಂದು ತಸ್ಲಿಮಾ ಅವರು ಟ್ವೀಟ್ ಮಾಡಿದ್ದಾರೆ.

ಬಾಂಗ್ಲಾದೇಶವು ಜಿಹಾದಿಸ್ತಾನವಾಗಿ ಮಾರ್ಪಟ್ಟಿದೆ. ಮದರಸಾಗಳು ಮೂಲಭೂತವಾದಿಗಳನ್ನು ಹುಟ್ಟುಹಾಕುವ ತಾಣಗಳಾಗಿವೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಧರ್ಮವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಈ ಹಿಂದೆಯೂ ತಸ್ಲಿಮಾ ಆರೋಪಿಸಿದ್ದರು.

ತಸ್ಲಿಮಾ ಅವರು ಇಸ್ಲಾಂ ಸಿದ್ಧಾಂತ ವಿರೋಧಿಸಿದ ಕಾರಣಕ್ಕಾಗಿ ಮೂಲಭೂತವಾದಿ ಸಂಘಟನೆಗಳಿಂದ ಕೊಲೆ ಬೆದರಿಕೆ ಎದುರಿಸುತ್ತಾ, 1994ರಲ್ಲಿ ಬಾಂಗ್ಲಾದೇಶ ತೊರೆದು ಭಾರತದಲ್ಲಿ ನೆಲೆಸಿದ್ದಾರೆ.

ಹಿಂದೂ ಪುರಾಣದಲ್ಲಿ 'ಅತ್ಯಾಚಾರ'ದ ಹೇಳಿಕೆ: ಎಎಂಯು ಉಪನ್ಯಾಸಕ ಅಮಾನತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.