ನ್ಯೂಯಾರ್ಕ್: ಎಲ್ಲಿ ನೋಡಿದರೂ ಜನ ಜಂಗುಳಿ, ನಡುರಾತ್ರಿಯಲಿ ಪರಸ್ಪರ ಕೈಕುಲುತ್ತಾ, ಚುಂಬಿಸುತ್ತಾ ಶುಭಾಷಯ ಹೇಳುತ್ತಾ ಹೊಸ ವರುಷಕ್ಕೆ ಸ್ವಾಗತ. ಕಳೆದ ವರ್ಷ ಡಿಸೆಂಬರ್ 31ರ ಮಧ್ಯರಾತ್ರಿ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನ ಜಾರ್ಜ್ ಎಂ ಕೋಹನ್ ಪ್ರತಿಮೆ ಎದುರು ಕಂಡು ಬಂದ ದೃಶ್ಯವಿದು.

ಅಂದು ಸಂಭ್ರಮದಿಂದ ಲಕ್ಷಾಂತರ ಜನಸಾಗರದ ಜೊತೆ 2020 ಅನ್ನು ಬರಮಾಡಿಕೊಂಡಿದ್ದ ಟೈಮ್ಸ್ ಸ್ಕ್ವೇರ್ ಈ ವರ್ಷ ಕೆಲವೇ ಕೆಲವು ನೂರು ಜನರಿಂದ 2021ಕ್ಕೆ ಸ್ವಾಗತ ಕೋರಲಿದೆ. ಅದರಲ್ಲೂ ಕೆಲ ಆಹ್ವಾನಿತ ಕೊರೋನಾ ವಾರಿಯರ್ಸ್ ಜೊತೆಗೆ. ದೇಹದ ಉಷ್ಣಾಂಶ ಪರೀಕ್ಷೆ, ಮುಖಕ್ಕೆ ಮಾಸ್ಕ್ ಧರಿಸಿ ದೇಶ ಅನುಭವಿಸುತ್ತಿರುವ ಕೋವಿಡ್ ಸಂಕಷ್ಟವನ್ನು ಪ್ರತಿಬಿಂಬಿಸುತ್ತ ಹೊಸ ವರ್ಷ ಆಚರಿಸಲಾಗುತ್ತದೆ. ಹೊಸ ವರ್ಷದಲ್ಲಿ ಹೊಸ ಭರವಸೆಗಳ ಜೊತೆ ಈ ವರ್ಷ ಇಲ್ಲಿ ಹೊಸ ವರ್ಷಾಚರಣೆ ನಡೆಯಲಿದೆ.

“ನಡುರಾತ್ರಿಯಲಿ ಗಡಿಯಾರದ ಮುಳ್ಳು ಒಂದು ನಿರ್ದಿಷ್ಟ ಜಾಗಕ್ಕೆ ತಲುಪುತಿದ್ದಂತೆ ಬೆನ್ನುಬಾಗಿದವೃದ್ಧನೊಬ್ಬ ಟೈಮ್ಸ್ ಸ್ಕೇರ್‌ಗೆ ಜ್ಯೋತಿಯನ್ನು ಹಸ್ತಾಂತರಿಸುತ್ತಾರೆ. ಆ ಮೂಲಕ ನಮ್ಮ 12 ತಿಂಗಳ ಕಷ್ಟಗಳು ಕೊನೆಗೊಳ್ಳುತ್ತವೆ ಎಂಬ ಬಲವಾದ ನಂಬಿಕೆ ಇಟ್ಟುಕೊಂಡಿದ್ದೇವೆ. ನಾನು 2020 ಅನ್ನು ಕೊನೆಗೊಳಿಸಿ 2021 ಅನ್ನು ಸ್ವಾಗತಿಸಲು ಕಾತರನಾಗಿದ್ದೇನೆ. ಮತ್ತೆಂದು 2020ರ ರೀತಿಯ ವರ್ಷವನ್ನು ನೋಡಲು ಬಯಸುವುದಿಲ್ಲ.” ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಸಹಾಯಕ ಮುಖ್ಯಸ್ಥ ಸ್ಟೀಫನ್ ಹಗ್ಸ್ ತಿಳಿಸಿದ್ದಾರೆ.

“ಗಡಿಯಾರದ ಸಮಯ 2021ಕ್ಕೆ ಪ್ರವೇಶಿಸುವ ಜೊತೆಗೆ ಎಲ್ಲ ಸಮಸ್ಯೆಗಳು ಮಾಯವಾಗುವುದಿಲ್ಲ.” ಎಂದು ಟೈಮ್ಸ್ ಸ್ಕ್ವೇರ್‌ಗೆ ಆಹ್ವಾನಿತ ನರ್ಸ್ ಜುನಿತಾ ಎರ್ಬ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.