ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಜಲಚರ ಕೃಷಿ ವಲಯದಲ್ಲಿ ವಿಮಾ ಯೋಜನೆಯನ್ನು ಜಾರಿಗೆ ತರಲು ಮತ್ತು ಇದರಲ್ಲಿ ಒಳಗೊಂಡಿರುವ ತಾಂತ್ರಿಕ ಸವಾಲುಗಳನ್ನು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯೊಂದಿಗೆ ಚರ್ಚೆ ಪ್ರಾರಂಭಿಸಿದೆ.

* ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಿಗಡಿ ಬೇಸಾಯ ಮತ್ತು ಮೀನುಗಾರಿಕೆ ವಲಯವನ್ನು ತರಲು ವಿವಿಧ ಹಂತದ ಚರ್ಚೆ ಮಾಡಲಾಗಿದೆ.

* ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಈ ಸಂಸ್ಥೆಯು ಜಲಚರ ಕೃಷಿ ವಲಯಕ್ಕೆ ವಿಮಾ ಯೋಜನೆಯನ್ನು ವಿಸ್ತರಿಸಬೇಕು ಎಂಬ ಪ್ರಸ್ತಾವ ಸಲ್ಲಿಸಿತ್ತು.

*ಪ್ರಾಥಮಿಕ ಹಂತದಲ್ಲಿ ಸಿಗಡಿ ಬೇಸಾಯ ಮತ್ತು ಉಪ್ಪು ನೀರಿನ ಮೀನುಗಾರಿಕೆಗೆ ಯೋಜನೆಯನ್ನು ವಿಸ್ತರಿಸಲು ಪ್ರಸ್ತಾಪಿಸಿತ್ತು. ಆಂಧ್ರಪ್ರದೇಶ, ಬಿಹಾರ್, ಗುಜರಾತ್, ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ಪ್ರಾರಂಭಿಸಬೇಕೆಂದು ಮನವಿ ಮಾಡಿದೆ.

ಜಲಚರ ಕೃಷಿ ವಲಯಕ್ಕೆ ವಿಮೆಯ ಅವಶ್ಯಕತೆ

* ಜಲಚರ ಕೃಷಿ ವಲಯದಲ್ಲಿ ಸವಾಲುಗಳು ಎದುರಾದಾಗ ಅಥವಾ ಸಮಸ್ಯೆಗಳು ಉಂಟಾದಾಗ ಅವಲಂಬಿತ ಮೀನುಗಾರರು ನಷ್ಟ ಅನುಭವಿಸುತ್ತಾರೆ. ಜಲಚರ ಕೃಷಿ ವಲಯಕ್ಕೆ ಪ್ರತ್ಯೇಕವಾಗಿ ವಿಮೆ ಕಲ್ಪಿಸಬೇಕು ಎಂಬ ಬೇಡಿಕೆ ಇತ್ತು.

* ಜಲಚರ ಕೃಷಿ ವಲಯ ಹವಾಮಾನ ಬದಲಾವಣೆಗಳ ಕಾರಣದಿಂದ, ನೈಸರ್ಗಿಕ ವಿಪತ್ತುಗಳ ಕಾರಣದಿಂದ ಮತ್ತು ರೋಗರುಜಿನಗಳ ಕಾರಣದಿಂದ ನಷ್ಟವನ್ನು ಅನುಭವಿಸುತ್ತವೆ. ವಿಮೆ ಇದ್ದರೆ ಹಣಕಾಸಿನ ನಷ್ಟ ಕಡಿಮೆ ಮಾಡಬಹುದು.

*ವಿಮೆ ನೀಡುವುದರಿಂದ ರೈತರ ಆತ್ಮವಿಶ್ವಾಸ ಹೆಚ್ಚುತ್ತದೆ. ಹೂಡಿಕೆದಾರರು ಆಸಕ್ತಿ ತೋರುತ್ತಾರೆ.

ಸಿಗಡಿ ಬೇಸಾಯ

* ಜಲಚರ ಕೃಷಿ ವಲಯದ ಅತ್ಯಂತ ಪ್ರಮುಖ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮುದ್ರದಲ್ಲಿ ಅಥವಾ ಸಿಹಿನೀರಿನಲ್ಲಿ ಮನುಷ್ಯನ ಬಳಕೆಗಾಗಿ ಸಿಗಡಿ ಉತ್ಪಾದನೆಯ ಚಟುವಟಿಕೆ ಎಂದು ಪರಿಗಣಿಸಬಹುದು.

* ಭಾರತದಲ್ಲಿ ಸಿಗಡಿ ಕೃಷಿಯನ್ನು ಕೈಗೊಳ್ಳಲು ಸುಮಾರು ಅಂದಾಜು 11 ಲಕ್ಷ ಹೆಕ್ಟೇರ್ ಗಿಂತ ಹೆಚ್ಚಿನ ಉಪ್ಪು ನೀರಿನ ಪ್ರದೇಶ ಲಭ್ಯವಿದ್ದು ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ಗೋವಾ, ತಮಿಳುನಾಡು, ಪುದುಚರಿ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ಸಿಗಡಿ ಬೇಸಾಯವನ್ನು ಮಾಡಲು ಸೂಕ್ತ ಪರಿಸರವಿದೆ.
11 ಲಕ್ಷ ಹೆಕ್ಟೇರ್ ಗಿಂತ ಹೆಚ್ಚಿನ ಸಾಮರ್ಥ್ಯವಿದ್ದರೂ ಪ್ರಸ್ತುತ 1.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಸಿಗಡಿ ಬೇಸಾಯವನ್ನು ಮಾಡುತ್ತಿದ್ದು ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಣೆ ಆಗುತ್ತಿಲ್ಲ.

ಸರ್ಕಾರದ ಉತ್ತೇಜನ

* ಮೀನುಗಾರಿಕೆ ಮತ್ತು ಜಲಚರ ಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿ.

* ನೀಲಿ ಕ್ರಾಂತಿ.

* ಕಿಸಾನ್ ಕ್ರೆಡಿಟ್ ಕಾರ್ಡ್ ವಿಸ್ತರಣೆ.

* ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.