ಬೆಂಗಳೂರು: ಚಿತ್ರೀಕರಣಕ್ಕಾಗಿ ಡ್ರೋನ್ಗಳನ್ನು ಬಳಸುವುದು ನಮಗೆಲ್ಲ ತಿಳಿದಿರುವ ವಿಚಾರ. ಈಗ ಅವುಗಳನ್ನು ಕೃಷಿ ಚಟುವಟಿಕೆಗಳಿಗೂ ಬಳಸಬಹುದು ಎನ್ನುತ್ತಿದೆ ಕೃಷಿ ಮೇಳದಲ್ಲಿನ ವರ್ಷಾ ಅಗ್ರಿ ಬಿಸಿನೆಸ್ ಸೆಂಟರ್ನ ಮಳಿಗೆ.

ಹೌದು, ಔಷಧ ಸಿಂಪಡಿಸುವ ಡ್ರೋನ್ಕೃಷಿ ಮೇಳದಲ್ಲಿ ರೈತರ ಗಮನಸೆಳೆಯುತ್ತಿದೆ.ಕೃಷಿ ಕಾರ್ಮಿಕರ ಕೊರತೆಯಿರುವುದರಿಂದ ಬಹುಪಯೋಗಿ ಯಂತ್ರಗಳ ಬಗ್ಗೆ ರೈತರ ಆಲೋಚಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿರು ಈ ಡ್ರೋನ್, ಕೇವಲ 15 ನಿಮಿಷದಲ್ಲಿ ಒಂದು ಎಕರೆಗೆ ಔಷಧವನ್ನು ಸಿಂಪಡಿಸುತ್ತದೆ.

ವರ್ಷಾ ಅಗ್ರಿ ಬಿಸಿನೆಸ್ ಸೆಂಟರ್ ಫಾರ್ ಡೆವಲಪಮೆಂಟ್ ಕಂಪನಿ ಅಭಿವೃದ್ಧಿ ಪಡಿಸಿರುವ ಈ ಡ್ರೋನ್ನ ಬೆಲೆ ಬರೋಬ್ಬರಿ ₹8 ಲಕ್ಷ. ಹೀಗೆಂದು ಕೇಳಿದ ಕೂಡಲೇ ಹುಬ್ಬೇರಿಸಿ ಮುಂದಕ್ಕೆ ಹೆಜ್ಜೆ ಇಡುತ್ತಿದ್ದ ರೈತರನ್ನು ಬಾಡಿಗೆಗೂ ಈ ಲಭ್ಯವಿದೆ ಎನ್ನುವ ವಿಚಾರ ಹಿಡಿದು ನಿಲ್ಲಿಸಿತು.

ಹತ್ತು ಲೀಟರ್ ಸಾಮರ್ಥ್ಯದ ಟ್ಯಾಂಕ್ ಹೊಂದಿರುವ ಈ ಡ್ರೋನ್ ಒಂದು ಕಿ.ಮೀ ವ್ಯಾಪ್ತಿಯ ಹಾಗೂ 100 ಮೀಟರ್ ಎತ್ತರದವರೆಗೂ ಹಾರಾಡುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ 15 ನಿಮಿಷ ಹಾರಾಡಿಸಬಹುದಾಗಿದ್ದು, ಈ ಸಮಯದಲ್ಲಿ ಒಂದು ಎಕರೆಗೆ ಔಷಧಿ ಸಿಂಪಡಿಸಬಹುದು.

‘ರಾಜ್ಯ ಯಾವುದೇ ಭಾಗದಲ್ಲಿಯೂ ಈ ಡ್ರೋನ್ ಬಾಡಿಗೆಗೆ ಲಭ್ಯವಿದ್ದು, ಒಂದು ಎಕರೆಗೆ ₹500 ದರವನ್ನು ಕಂಪನಿ ನಿಗದಿಪಡಿಸಿದ್ದೇವೆ. ಇದನ್ನು ಖರೀದಿಸಿದರೆ, ಅದರ ಹಾರಾಟಕ್ಕೆ ಗ್ರಾಹಕರೇಅನುಮತಿಯನ್ನು ಪಡೆದುಕೊಳ್ಳಬೇಕು’ ಎಂದು ಕಂಪನಿಯ ಶಿವಾನಂದ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.