ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾವ ಅಭಿವ್ಯಕ್ತಿಗೆ ಕಲೆಯೆ ರಹದಾರಿ

ದಿವ್ಯಶ್ರೀ ಹೆಗಡೆ
Published 14 ಆಗಸ್ಟ್ 2024, 23:16 IST
Last Updated 14 ಆಗಸ್ಟ್ 2024, 23:16 IST
ಅಕ್ಷರ ಗಾತ್ರ

ಭಾವನೆಗಳ ಹರಿವನ್ನು ಕಲೆಯ ಮೂಲಕ ಅಭಿವ್ಯಕ್ತಿ ಪಡಿಸುವುದು ಒಂದು ವಿಧ. ಅದರಲ್ಲಿ ಚಿತ್ರಕಲೆ, ದೃಶ್ಯಕಲೆ ವಿಗ್ರಹಗಳ ಕೆತ್ತನೆ ಫೋಟೊಗ್ರಫಿಗಳಿಗೆ ಪ್ರಮುಖ ಸ್ಥಾನವಿದೆ. ಅಂತರಾಳದ ಭಾವನೆಗಳಿಗೆ ಹೊಸ ರೂಪವನ್ನು ನೀಡಿ ಜನರ ಮನಸ್ಸನ್ನು ತಲುಪುತ್ತಿದೆ. ಕಲಾಸಕ್ತರಿಗಾಗಿ ‘ಮ್ಯೂಸಿಯಂ ಆಫ್ ಆರ್ಟ್ ಅಂಡ್ ಫೋಟೋಗ್ರಾಫಿ’ (ಎಂ.ಎ.ಪಿ) ಅಂತಹ ಕಲೆಗಳನ್ನು ಸಂಗ್ರಹಿಸಿ ಇಡಲಾಗಿದೆ. 

ಇತಿಹಾಸದ ಹರಪ್ಪ ಮತ್ತು ಮೆಹೆಂಜೊದಾರೋ ಕಾಲದ ವಿಗ್ರಹಗಳನ್ನು ಇಲ್ಲಿ ಮರು ಸೃಷ್ಟಿಸಿದ್ದಾರೆ. ಹಿಂದಿನ ಕಾಲದ ಶಿಥಿಲಗೊಂಡಿದ್ದ ವಿಗ್ರಹಗಳ ಮರು ಜೋಡಣೆಯ ಕೆಲಸಗಳೂ ಇಲ್ಲಿ ನಡೆದಿದೆ. ಕಂಚಿನಿಂದ ವಿಗ್ರಹಗಳನ್ನು ಕೆತ್ತಲಾಗಿದ್ದು ಮದೀನಾ ಎಂಬುವವಳ ಜೀವನವನ್ನು ಚಿತ್ರಿಸಲಾಗಿದೆ. 

ಸಾದೃಶ್ಯ ಅದೃಶ್ಯ 

ಮಹಿಳೆಯ ಅಸ್ಮಿತೆ, ಲೈಂಗಿಕತೆ, ಹಿಂಸೆ, ಪ್ರತಿರೋಧಗಳು ಇಲ್ಲಿ ಪೇಂಟಿಂಗ್‌, ಶಿಲ್ಪಗಳು ಚಿತ್ರಪಟಗಳಾಗಿ ಇಲ್ಲಿ ಕಾಣಸಿಗುತ್ತದೆ. ಜವಳಿಗಳನ್ನೂ ಇಲ್ಲಿ ಬಿತ್ತರಿಸಿರುವುದು ಹೊಸ ಪ್ರಯೋಗವಾಗಿದೆ. ಅದರ ಜೊತೆಗೆ ಸ್ಪರ್ಶಕಲೆಗಳೂ ಕೂಡಾ ನವೀನ ಪ್ರಯೋಗವಾಗಿದೆ ಇದು ಅಂಧರಿಗೆ ಸ್ಪರ್ಶಿಸುವ ಮೂಲಕ ಕಲೆಯನ್ನು ಆಸ್ವಾಧಿಸಲು ಸ್ಪರ್ಶಕಲೆಯನ್ನು ಸಾದೃಶ್ಯ ಅದೃಶ್ಯ ಭಾಗದಲ್ಲಿ ಜೋಡಿಸಿಟ್ಟಿದ್ದಾರೆ.

ಸಾಸ್ಕೆನ್‌ ಮಲ್ಟಿ ಮೀಡಿಯಾ ಉಗ್ರಾಣ

ಐತಿಹಾಸಿಕ ಚಿತ್ರಣ ಮತ್ತು ಕೆತ್ತನೆಗಳು ಡಿಜಿಟಲೀಕರಣಗೊಂಡಿದೆ. ಡಿಜಿಟಲ್‌ ಮಾಧ್ಯಮದಲ್ಲಿ ಎಲ್ಲ ಮಾಹಿತಿಗಳು ಬಿತ್ತರವಾಗುತ್ತದೆ. ಕಲಾಕೃತಿಗಳ ಪ್ರದರ್ಶನಕ್ಕೆ ನವ ಯುಗದ ಸ್ಪರ್ಶವನ್ನು ನೀಡುವ ಕಾರ್ಯ ಸಾಸ್ಕೆನ್‌ ಮಲ್ಟಿ ಮೀಡಿಯಾ ಉಗ್ರಾಣದಲ್ಲಾಗಿದೆ. 

ಹಲೋ.... ಗುಡ್‌ ಬೈ...

ಹಿಂದಿನ ಅಂಚೆ ಚೀಟಿಗಳನ್ನು ಸಂಗ್ರಹಿಸಿಡಲಾಗಿದ್ದು ಹಲೋ... ಗುಡ್‌ ಬೈ.. ಎಂಬ ಹೆಸರನ್ನು ನೀಡಲಾಗಿದೆ. ವಸಾಹಿತುಶಾಹಿತ್ವ ಕಾಲದಲ್ಲಿ ಜನರು ಬಳಸುತ್ತಿದ್ದ ಅಂಚೆ ಚೀಟಿಗಳು, ಅದರಲ್ಲಿ ಬಳಸುತ್ತಿದ್ದ ಚಿತ್ರಗಳು ಅದರೊಟ್ಟಿಗೆ ಬರಹಗಳನ್ನು ಕೂಡ ಸಂಗ್ರಹಿಸಿಡಲಾಗಿದೆ. ಇದನ್ನು ಡಿಜಿಟಲೀಕರಣ ಮಾಡಿದ್ದು ಅದರ ವಿವರಣೆ ಹಾಗೂ ಚಿತ್ರದ ಪ್ರದರ್ಶನ ಪರದೆಯ ಮೇಲೆ ಮೂಡುತ್ತಿರುತ್ತದೆ. 

ಡಿಜಿಟಲೀಕರಣ ಪಥದಲ್ಲಿ ಹೊಸ ಹೆಜ್ಜೆ

ಅನಾದಿ ಕಾಲದಿಂದಲೂ ಸಂಗ್ರಹಿಸಿ ಇಡಲಾಗಿದ್ದ ಚಿತ್ರ, ವಿಗ್ರಹಗಳು, ಮೂರ್ತಿಗಳನ್ನು ಹೊಸಕಾಲ ಘಟ್ಟಕ್ಕೆ ತಕ್ಕಂತೆ ವೀಡಿಯೊ ಹಾಗೂ ಆಡಿಯೋದ ಮೂಲಕ ಕಲಾಚಿತ್ರಣಗಳನ್ನು ಸಂಗ್ರಹಿಸಿ ಇಡಲಾಗಿದೆ. ಇದು ಡಿಜಿಟಲೀಕರಣ ಪಥದಲ್ಲಿ ಸಾಗುತ್ತಿರುವ ಹೊಸ ಹಾದಿಯಾಗಿದೆ.  ಥ್ರೀಡಿ ಚಿತ್ರಗಳೂ ಸಹ ಇದರ ಭಾಗವಾಗಿ ಇಲ್ಲಿದೆ. 2000 ಅಧಿಕ ಚಿತ್ರಪಟ, ವಿಗ್ರಹಗಳನ್ನು ಥ್ರೀಡಿಯ ಮೂಲಕ ಜನರ ವೀಕ್ಷಣೆಗೆ ಅನುಕೂಲ ಮಾಡಲಾಗಿದೆ. 

ಎಂಎಪಿಯಲ್ಲಿ ಕಲಾಸಕ್ತರಿಗೆ ಕಲೆ ಹಾಗೂ ಮುದ್ರಣಕಲೆಯ ಬಗ್ಗೆ ಕಾರ್ಯಾಗಾರಗಳು ಜರುಗುತ್ತದೆ. ಕಲಾ ಸಕ್ತರು ಹಾಗೂ ಅಲ್ಲಿಯ ವಿದ್ಯಾರ್ಥಿಗಳಿಂದ ಕಲಾ ಕಾರ್ಯಕ್ರಮ ನಡೆಯುತ್ತಿರುತ್ತದೆ. ದೇಶ ವಿದೇಶಗಳಿಂದಲೂ ವಿದ್ಯಾರ್ಥಿಗಳು ಇಲ್ಲಿ ಬಂದು ಕಲೆಯನ್ನು ಅಭ್ಯಸಿಸುತ್ತಿದ್ದಾರೆ. ಇತಿಹಾಸ ಹಾಗೂ ಕಲೆಯ ಪುಸ್ತಕಗಳನ್ನು ಒಳಗೊಂಡಿರುವ ಗ್ರಂಥಾಲಯ ಸಹ ಇಲ್ಲಿದೆ. ವಿದೇಶದ ಕಲಾಸಕ್ತರನ್ನು ಹೆಚ್ಚು ‘ಮ್ಯೂಸಿಯಂ ಆಫ್ ಆರ್ಟ್ ಅಂಡ್ ಫೋಟೋಗ್ರಾಫಿ’ ಆಕರ್ಷಿಸುತ್ತಿದೆ. 

ಹೆಚ್ಚಿನ ಮಾಹಿತಿಗಾಗಿ: https://map-india.org/ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT