ಅವರ ಹೆಸರು ಆರ್. ಜಿ. ಭಟ್ರು. ಕಾರವಾರ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಬೆಳಸೂರು ಅವರ ಊರು. ಸುತ್ತಮುತ್ತಲಿನ ಜನ ಅವರನ್ನು ರಾಮಚಂದ್ರಭಟ್ಟ ಬೆಳಸೂರರು ಅಂತಾ ಕರೆಯುತ್ತಾರೆ. ಸುತ್ತಲಿನ ಹಳ್ಳಿ ಮಂದಿ ಭಟ್ಟರನ್ನು ತಮ್ಮ ಮನೆಯವರೆನ್ನುವಂತೆ ಕಾಣುತ್ತಾರೆ. ಈ ನಂಟಿಗೆ ಕಾರಣ ಅವರು ಕೈಚೀಲದಲ್ಲಿ ಹೊತ್ತು ತರುವ ಪುಸ್ತಕಗಳು.

ಮಾಸಲು ಬಣ್ಣದ ಅಂಗಿ, ಪ್ಯಾಂಟು, ಕೈಯಲ್ಲಿ ಬಿಳಿ ಚೀಲ ಭಟ್ಟರ ಟ್ರೇಡ್ಮಾರ್ಕ್. ಅವರು ಸೈಕಲ್ ಏರಿದರೆ ದಿನಕ್ಕೆ 40 ಕಿ.ಮೀವರೆಗೂ ಸುತ್ತು ಹಾಕುತ್ತಾರೆ. ಜೋಳಿಗೆಯಲ್ಲಿದ್ದ ಪುಸ್ತಕಗಳನ್ನು ಹೊತ್ತು ತರುವ ಇವರನ್ನು ಪ್ರತಿ ಮನೆಯವರು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಮನೆ ಎದುರಿನ ಜಗಲಿ ಮೇಲೋ, ಅಂಗಳದಲ್ಲೋ, ಪಡಸಾಲೆಯಲ್ಲೋ ಕುಳಿತ ಭಟ್ಟರು, ಚೀಲದಲ್ಲಿದ್ದ ಪುಸ್ತಕಗಳನ್ನು ತೆರೆದಿಡುತ್ತಾರೆ. ಅವರ ಸುತ್ತ ವಯೋಬೇಧವಿಲ್ಲದೇ ಜನರು ಸುತ್ತುವರಿದಿರುತ್ತಾರೆ.

ಅವರ ಕೈ ಚೀಲದಲ್ಲಿ ಮಕ್ಕಳು ಓದುವ ಪಂಚತಂತ್ರ, ಚಂದಮಾಮ ಪುಸ್ತಕಗಳಿಂದ ಹಿಡಿದು ಹಿರಿಯರು ಓದುವ ರಾಮಾಯಣ, ಮಹಾಭಾರತ, ಭಗವದ್ಗೀತೆ, ವ್ಯಾಸಭಾರತದಂತಹ ಕಾವ್ಯ ಕೃತಿಗಳೂ ಇರುತ್ತವೆ. ಇಷ್ಟೇ ಅಲ್ಲ. ಗ್ರಾಮೀಣರಿಗೆ ಅಗತ್ಯವಾದ ಗ್ರಾಮ ತಾಲ್ಲೂಕು ನಕ್ಷೆ ಅರ್ಜಿಗಳು, ಕೃಷಿ ಮಾಹಿತಿ ಇವೆಲ್ಲ ಲಭ್ಯ.

ನಿತ್ಯ ತಮ್ಮ ತಿರುಗಾಟದಲ್ಲಿ ಹಲವು ಮಂದಿ, ಹಲವು ರೀತಿಯ ಪುಸ್ತಕಗಳನ್ನು ಕೊಟ್ಟಿರುತ್ತಾರೆ. ಆದರೆ, ಅವ್ಯಾವುನ್ನೂ ಪುಸ್ತಕದಲ್ಲಿ ದಾಖಲು ಮಾಡಿಕೊಂಡಿರುವುದಿಲ್ಲ. ಆದರೆ, ಯಾರಿಗೆ ಯಾವ ಪುಸ್ತಕ ಕೊಟ್ಟಿದ್ದೇನೆ ಎಂಬ ಮಾಹಿತಿ ಅವರ ‘ಮಸ್ತಕ’ದಲ್ಲಿ ದಾಖಲಾಗಿರುತ್ತದೆ. ಅವರಲ್ಲಿ ಅಂಥ ನೆನಪಿನಶಕ್ತಿ ಇದೆ.

ಯಲ್ಲಾಪುರದಿಂದ 7 ಕಿ.ಮೀ ಇರುವ ಬೆಳಸೂರು, ಭಟ್ಟರ ಸೇವಾಕೇಂದ್ರ. ಅವರು ತಮ್ಮ ಮನೆಯ ಪಕ್ಕದಲ್ಲಿ ‘ಶ್ರೀ ದುರ್ಗಾಂಬಿಕ ಗ್ರಂಥಾಲಯ ಬೆಂಬಲಿಗರ ಬಳಗ’ ಎಂಬ ಪುಸ್ತಕ ಕೇಂದ್ರವನ್ನು ತೆರೆದಿದ್ದಾರೆ. ಪುಸ್ತಕ ಸಂಸ್ಕೃತಿಯನ್ನು ಬೆಳೆಸುವುದು ಈ ಬಳಗದ ಉದ್ದೇಶ. ಈ ನಿಟ್ಟಿನಲ್ಲಿ ಅವರು ಮನೆ ಮನೆ ತಿರುಗಿ, ಜನರ ಮನವೊಲಿಸಿ, ಪುಸ್ತಕ ಸಂಗ್ರಹಿಸಿ ತರುತ್ತಾರೆ. ಮನೆಗಳ ಪೆಟಾರಿಯಲ್ಲಿ, ಟ್ರಂಕ್ಗಳಲ್ಲಿ ದೂಳು ಹಿಡಿದಿದ್ದ ಪುಸ್ತಕಗಳನ್ನು ಕೇಳಿಸಂಗ್ರಹಿಸಿತ್ತಾರೆ. ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಇಡಲು ಕಪಾಟುಗಳನ್ನು ಮಾಡಿಸಿ, ವ್ಯವಸ್ಥಿತವಾಗಿ ಪುಸ್ತಕಗಳನ್ನು ಜೋಡಿಸಿದ್ದಾರೆ. ಯಾರು ಬೇಕಾದರೂ ಈ ಗ್ರಂಥಾಲಯಕ್ಕೆ ಬಂದು ಆರಾಮಾಗಿ ಕುಳಿತು ಓದಬಹುದು.

ಓದುವ ಸಂಸ್ಕೃತಿ ಜತೆಗೆ, ಹಲವು ಕೌಶಲ ತರಬೇತಿಗಳನ್ನು ಕಲಿಸುತ್ತಾರೆ. ಮಹಿಳೆಯರಿಗೆ ಹೊಲಿಗೆ ತರಬೇತಿ, ಜೇನುಸಾಕಣಿಕೆ ತರಬೇತಿ, ಕಲಾವಿದರಿಗೆ ಭಾಗವತಿಕೆ, ಮದ್ದಳೆ, ಚಂಡೆ ನುಡಿಸುವುದು, ಅಭಿನಯ, ಮಾತುಗಾರಿಕೆಯ ತರಬೇತಿ ನೀಡುತ್ತಾರೆ. ಯಕ್ಷಗಾನ ಕಲಾವಿದರಾಗಿರುವ ಕಾರಣ, ಯಕ್ಷಗಾನದ ಮೂಲಕವೇ ಸಾಮಾಜಿಕ ಕಳಕಳಿ ಬಿಂಬಿಸುವಂತಹ ಕಾರ್ಯಕ್ರಮಗಳನ್ನು ಪ್ರಸ್ತುಪಡಿಸುತ್ತಾರೆ. ಇವರು ರಚಿಸಿದ ತಾಳಮದ್ದಳೆ ಆಕಾಶವಾಣಿಯಲ್ಲಿ ಬಿತ್ತರಗೊಂಡಿದೆ.

‘ತರಬೇತಿಗಾಗಿ ಬರುವ ನಿರುದ್ಯೋಗಿ ಉದ್ಯೋಗಿಗಳು ಗ್ರಂಥಾಲಯಕ್ಕೂ ಭೇಟಿ ಕೊಡಬೇಕು. ಅಲ್ಲಿರುವ ಪುಸ್ತಕಗಳನ್ನು ಓದುವಂತಾಗಬೇಕು. ಮೊಬೈಲ್ ಫೋನ್, ಟಿವಿಗೆ ಮಾರು ಹೋಗಿರುವ ಮಕ್ಕಳನ್ನು ಪುನಃ ಪುಸ್ತಕ ಪ್ರಪಂಚದೊಳಗೆ ಕರೆತರಬೇಕು. ಓದುವವರ ಸಂಖ್ಯೆ ಹೆಚ್ಚಿಸಬೇಕು ಎಂಬುದು ನನ್ನ ಆಶಯ’ ಎನ್ನುತ್ತಾರೆ ರಾಮಚಂದ್ರಭಟ್ಟರು.

ಭಟ್ಟರ ಸಮಾಜಮುಖಿ ಚಟುವಟಿಕೆಗಳನ್ನು ಗುರುತಿಸಿ ಗೌರವಿಸಿರುವ ಉದಾಹರಣೆಗಳಿವೆ. ಕೆಲವರು ಇವರ ಕಾರ್ಯವನ್ನು ಮೆಚ್ಚಿ ಪುಸ್ತಕಗಳನ್ನು ದೇಣಿಗೆ ಕೊಟ್ಟಿದ್ದಾರೆ.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.