‘ಸಾವಿರದ ಸಂಚಯ’ ಕೃತಿಯಿಂದ ಸಾಹಿತ್ಯ ಜಗತ್ತಿಗೆ ಚಿರಪರಿಚಿತರು ಎಚ್.ಆರ್.ಲೀಲಾವತಿ. ವಿ.ಕೃ.ಗೋಕಾಕ್, ಗೋಪಾಲಕೃಷ್ಣ ಅಡಿಗರಂತಹ ಮಹನೀಯರು ಆ ಕೃತಿಯನ್ನು ಮೆಚ್ಚಿದ್ದರು. ಇದೀಗ ಲೀಲಾವತಿಯವರು ‘ವಚನ ಸಿರಿ’ ಎಂಬ ನೂತನ ಕೃತಿ ರಚಿಸಿದ್ದಾರೆ. 180 ಪುಟಗಳ ಈ ಕೃತಿಯಲ್ಲಿ 500ಕ್ಕೂ ಅಧಿಕ ಚಿಕ್ಕ ಚಿಕ್ಕ ವಚನಗಳಿವೆ. ವಿವಿಧ ವಿಷಯಗಳ ಕುರಿತಾದ ಈ ಪ್ರತಿ ವಚನವು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸ್ಮರಣೆಯೊಂದಿಗೆ ಅಂತ್ಯವಾಗುತ್ತದೆ.

ಎದೆಯ ಹಣತೆಯ ಮಾಡಿ ಬುದ್ಧಿ ಬತ್ತಿಯ ಹೊಸೆದು

ಭಾವ ತೈಲದೊಳದ್ದಿ ಭಕ್ತಿ ದೀವಿಗೆ ಬೆಳಗಿ

ನಾನಿನ್ನ ಚರಣಗಳಿಗರ್ಪಿಸುವೆ ತೊದಲಿಲಿಯ

ಸ್ವೀಕರಿಸಿ ಹರಸೆನ್ನ ಮಂಜುನಾಥ

ಎಂದು ಸ್ವಾಮಿಯನ್ನು ಸ್ಮರಿಸುತ್ತ, ಕೃತಿಯನ್ನು ಧರ್ಮಸ್ಥಳಪುರಾಧೀಶನಿಗೆ ಅರ್ಪಿಸಿದ್ದಾರೆ.

‘ಛಂದಸ್ಸಿನ ನಿರ್ವಹಣೆಯಲ್ಲಾಗಲೀ ಶಬ್ದಗಳ ಪ್ರಯೋಗದಲ್ಲಿ ಆಗಲಿ ಲೀಲಾವತಿಯವರ ಕವನಗಳು ಕುಂಟುವುದಿಲ್ಲ’ ಎಂದು ಗೋಪಾಲಕೃಷ್ಣ ಅಡಿಗರು ಲೀಲಾ ಅವರ ಬರವಣಿಗೆಯನ್ನು ಪ್ರಶಂಸಿಸಿದ್ದರು. ಈ ಕೃತಿಯ ಕವನಗಳಲ್ಲೂ ಆ ಬನಿ ಇದೆ. ಬದುಕಿನ ಒಲವು, ಗೆಲುವು, ನೋವು, ನಲಿವುಗಳನ್ನು ಶಬ್ದಗಳಲ್ಲಿ ಸೆರೆ ಹಿಡಿದಿದ್ದಾರೆ. ಬಳಸಿದ ಭಾಷೆ ಒಂದು ರೀತಿಯ ಆಹ್ಲಾದಕರವಾದ ಓದಿನ ಅನುಭವ ನೀಡುತ್ತದೆ.

ಹುಟ್ಟುತಲೆ ಸೂತಕವು ಸಾವಿನಲು ಸೂತಕವೆ

ನಟ್ಟ ನಡುವಿನಲಷ್ಟೇ ಮಡಿ ಹುಡಿಯ ಆರ್ಭಟವು

ಕೋಟಿ ಜೀವಿಗಳಲ್ಲಿ ನಮಗೆ ಮಾತ್ರವೆ ಏಕೊ

ಈ ತೆರೆನ ಬೇಲಿಗಳು ಮಂಜುನಾಥ... ‘ಬೇಲಿ’ ಎಂಬ ಪದ್ಯದ ಸಾಲಿದು. ಈ ರೀತಿಯ ಓದಿ ನೆನಪಿನಲ್ಲಿಟ್ಟುಕೊಳ್ಳಬೇಕಾದ, ಅರ್ಥೈಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಬಹಳಷ್ಟು ಸಾಲುಗಳು ಈ ಕೃತಿಯಲ್ಲಿ ಸಿಗುತ್ತವೆ.

Cut-off box - ವಚನ ಸಿರಿ ಲೇ:ಎಚ್.ಆರ್.ಲೀಲಾವತಿ ಪ್ರ:ಸಂವಹನ ಮೈಸೂರು ಸಂ: 9379252241 ಬೆ:180 ಪು:180

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.