ಪತ್ರಿಕೋದ್ಯಮ ಪಲ್ಲಟಗಳು

ಲೇ: ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ

ಪ್ರ: ಬಹುರೂಪಿ

ಸಂ: 7019182729

ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಪತ್ರಿಕೋದ್ಯಮ ಪರಿಭಾಷೆಯನ್ನು ಅವಲೋಕಿಸುವ ಕೃತಿ ‘ಪತ್ರಿಕೋದ್ಯಮದ ಪಲ್ಲಟಗಳು’. ಲೇಖಕ ಪ್ರೊ.ಎ.ಎಸ್.ಬಾಲಸುಬ್ರಹ್ಮಣ್ಯ ಅವರು ನಾಡಿನ ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಗ್ರಹ ರೂಪವಿದು. ನಾಲ್ಕು ವಿಭಾಗಗಳಲ್ಲಿ 29 ಲೇಖನಗಳಿವೆ. ಇವುಗಳಲ್ಲಿ ಹೆಚ್ಚಿನವು ಮುದ್ರಣ ಮಾಧ್ಯಮಕ್ಕೆ ಸಂಬಂಧಿತ ಬರಹಗಳು. ತಂತ್ರಜ್ಞಾನ, ದೃಶ್ಯ ಮಾಧ್ಯಮದತ್ತಲೂ ದೃಷ್ಟಿ ಹಾಯಿಸಿದ್ದಾರೆ.

‘ಕಾವಲುನಾಯಿಯನ್ನು ಕಾಯುವವರು ಯಾರು?’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರೊ.ಎಚ್.ಎಸ್. ಈಶ್ವರ ಅವರು ಈ ಕೃತಿಗೆ ಬರೆದ ಮುನ್ನುಡಿ ಮಾಧ್ಯಮ ಲೋಕದ ಇಂದಿನ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ‘ಮಾಧ್ಯಮ ಆಸಕ್ತರು ಗಂಭೀರವಾಗಿ ಪರಿಗಣಿಸಬೇಕಾದ ಪುಸ್ತಕವಿದು. ಹೆಸರೇ ಸೂಚಿಸುವಂತೆ ಲೇಖನಗಳ ವಸ್ತು ಅಥವಾ ವಿಚಾರಗಳು ಭಾರತೀಯ ಮಾಧ್ಯಮ ಕ್ಷೇತ್ರದಲ್ಲಿ ಸಂಭವಿಸಿದ ಪ್ರಮುಖ ಘಟ್ಟಗಳಿಗೆ, ಪ್ರವೃತ್ತಿಗಳಿಗೆ ಸಂಬಂಧಿಸಿವೆ’ ಎಂದು ಮುನ್ನುಡಿಯಲ್ಲಿ ಬರೆದಿದ್ದಾರೆ.

‘ಪತ್ರಿಕೋದ್ಯಮಕ್ಕೆ ಒಬ್ಬರೇ ನಾಡಿಗರು!’ ಲೇಖನದಲ್ಲಿ ನಾಡಿಗ ಕೃಷ್ಣಮೂರ್ತಿ ಅವರು ಪತ್ರಿಕೋದ್ಯಮ ಜಗತ್ತಿನಲ್ಲಿ ಮಾಡಿದ ಕೆಲಸಗಳನ್ನು ಮೆಲುಕು ಹಾಕಲಾಗಿದೆ. ಪತ್ರಿಕೋದ್ಯಮ ಲೋಕದಲ್ಲಿ ಅಗಸ್ಟಸ್ ಹಿಕ್ಕಿ, ಹರ್ಮನ್ ಮೊಗ್ಲಿಂಗ್ ಅವರ ಕೊಡುಗೆಗಳನ್ನು ಸ್ಮರಿಸುವ ಲೇಖನಗಳಿವೆ. ‘ದಿ ಗಾರ್ಡಿಯನ್’, ‘ರೀಡರ್ಸ್ ಡೈಜೆಸ್ಟ್’ ಮಾಡಿದ ಮೋಡಿ ಕುರಿತಾದ ಬರಹಗಳೂ ಇವೆ.

ಪತ್ರಿಕಾ ಜಗತ್ತಿಗೆ ಎಐ ತಂತ್ರಜ್ಞಾನ ಒಡ್ಡುತ್ತಿರುವ ಸವಾಲು, ಡಿಜಿಟಲ್ ಸ್ಪರ್ಧೆಗಳನ್ನು ಅವಲೋಕಿಸಲಾಗಿದೆ. ಓಟಿಟಿ ಸೃಷ್ಟಿಸುತ್ತಿರುವ ಸಂಚಲನವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಓದಲು ಯೋಗ್ಯವಾದ ಕೃತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.