ಬಿಂಬದೊಳಗೊಂದು ಬಿಂಬ

ಲೇ:ರೇಶ್ಮಾ ಉಳ್ಳಾಲ್

ಪ್ರ: ನವಕರ್ನಾಟಕ

ಸಂ: 08022161900

ಪು: 256

ದ: 295

ಟ್ರಾನ್ಸ್‌ಜೆಂಡರ್‌ಗಳ ಅಸ್ತಿತ್ವ ಮತ್ತು ಸಾಮಾಜಿಕ ಸಂಘರ್ಷದ ಕಥನವನ್ನು ಹೇಳುವ ಕೃತಿ ‘ಬಿಂಬದೊಳಗೊಂದು ಬಿಂಬ’. ಮೂಲತಃ ಪತ್ರಕರ್ತೆಯಾಗಿರುವ ಕೃತಿಯ ಲೇಖಕಿ ರೇಷ್ಮಾ ಉಳ್ಳಾಲ್, ಲಿಂಗತ್ವ ಅಲ್ಪಸಂಖ್ಯಾತರ ಬದುಕಿನ ಕುರಿತು ಸಂಶೋಧನೆ ಹಾಗೂ ಅಧ್ಯಯನದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದವರು. ಆ ಅಧ್ಯಯನದಲ್ಲಿ ಕಂಡ ವಿಷಯಗಳನ್ನೇ ಕೃತಿಯಾಗಿಸಿದ್ದಾರೆ.

‘ತೃತೀಯ ಲಿಂಗಿಗಳ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ, ಸಾಮಾಜಿಕ ಮತ್ತು ಮಾನಸಿಕ ಸಂಘರ್ಷವನ್ನು ಜಾಗತಿಕ ಮಟ್ಟದಲ್ಲಿ ನಿಂತು ಅವಲೋಕನ ಮಾಡಿರುವುದು ಸ್ತುತ್ಯರ್ಹ. ಇದು ಕನ್ನಡದ ಸಂದರ್ಭದಲ್ಲಿ ತೃತೀಯ ಲಿಂಗಿಗಳ ಬದುಕಿನ ಬಗ್ಗೆ ಮಾಡಿರುವ ಮೊದಲ ಸಂಶೋಧನೆಯಾಗಿದ್ದು, ನಮಗೆ ಸಮಗ್ರವಾದ ಮಾಹಿತಿಯನ್ನು ನೀಡುತ್ತದೆ’ ಎಂದು ಬಿ.ಎಸ್.ಲಿಂಗದೇವರು ಕೃತಿಯ ಮುನ್ನುಡಿಯಲ್ಲಿ ಬರೆದಿದ್ದಾರೆ.

ಕೃತಿಯಲ್ಲಿ ಒಟ್ಟು 14 ಲೇಖನಗಳಿವೆ. ಮೊದಲ ಲೇಖನವೇ ಟ್ರಾನ್ಸ್‌ಜೆಂಡರ್ ಸಮುದಾಯದ ಕುರಿತು ಸಮಗ್ರ ಮಾಹಿತಿ ಒದಗಿಸುತ್ತದೆ. ‘ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ತೃತೀಯ ಲಿಂಗಿಗಳು’ ಎಂಬ ಲೇಖನ ಅರ್ಧನಾರೀಶ್ವರನ ಕಲ್ಪನೆಯಿಂದ ಹಿಡಿದು ಪುರಾಣದಲ್ಲಿ ಬರುವ ಅನೇಕ ಟ್ರಾನ್ಸ್‌ಜೆಂಡರ್ ಕಲ್ಪನೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಅವರ ದೈವ ಸವದತ್ತಿ ಎಲ್ಲಮ್ಮನ ಕಥೆಯೂ ಇಲ್ಲಿ ಸಿಗುತ್ತದೆ.

ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆ ಟ್ರಾನ್ಸ್‌ಜೆಂಡರ್‌ಗಳ ಅಸ್ತಿತ್ವ, ಇತಿಹಾಸವನ್ನು ವಿವರಿಸುವ ಯತ್ನವೂ ಇಲ್ಲಿದೆ. ಒಟ್ಟಾರೆಯಾಗಿ ಸಮಾಜದಲ್ಲಿ ಈ ಸಮುದಾಯದ ಕುರಿತು ಇರುವ ತಾತ್ಸಾರ, ಅಸಂಯಮದ ಮನೋಭಾವ ಹೋಗಲಾಡಿಸಿ ಅವರನ್ನೂ ಮನುಷ್ಯರಂತೆ ಕಾಣಬೇಕು, ಅದಕ್ಕಾಗಿ ಆ ಸಮುದಾಯದ ಹೋರಾಟ ಹೇಗಿದೆ ಎಂಬ ಆಶಯವನ್ನು ಕೂಡ ಹೊರಹಾಕುವ ಕೃತಿಯಿದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.