ಹಿಂದೂ ಧರ್ಮದ ನೆಲೆಗಟ್ಟಿನಲ್ಲಿ ವಿವೇಕಾನಂದರನ್ನು ವಿಶ್ಲೇಷಿಸುವ ಸಾಕಷ್ಟು ಕೃತಿಗಳಿವೆ. ಆನೂಡಿ ನಾಗರಾಜ್‌ರ ‘ನಿಜದ ಕಣ್ಣಲ್ಲಿ ಸ್ವಾಮಿ ವಿವೇಕಾನಂದ’ ಕೃತಿ ಮುಖ್ಯವೆನ್ನಿಸುವುದು, ವಿವೇಕಾನಂದರಿಗೆ ಒಂದು ಸಾಮಾಜಿಕ ಆಯಾಮವನ್ನು ಕಲ್ಪಿಸಿರುವುದರಲ್ಲಿ. ಈ ಸಾಮಾಜಿಕ ಆವರಣ ‘ಬಹುತ್ವ ಭಾರತ’ದ ಆಶಯಕ್ಕೆ ಪೂರಕವಾಗಿದೆ ಹಾಗೂ ಧರ್ಮವನ್ನು ಜೀವಪರಗೊಳಿಸುವುದಾಗಿದೆ.

ಕೃತಿಯ ಶೀರ್ಷಿಕೆಯಲ್ಲಿನ ‘ನಿಜ’, ವಿವೇಕಾನಂದರ ಚಿಂತನೆಗಳನ್ನು ಸಮಕಾಲೀನಗೊಳಿಸುವ ಪ್ರಯತ್ನವಾಗಿದೆ. ವರ್ತಮಾನದ ಬಿಕ್ಕಟ್ಟುಗಳಿಗೆ ವಿವೇಕರ ಚಿಂತನೆಗಳಲ್ಲಿ ಇರಬಹುದಾದ ಔಷಧಿರೂಪದ ಸಾಧ್ಯತೆಗಳನ್ನು ಕೃತಿ ಸಹೃದಯರ ಗಮನಕ್ಕೆ ತರುವಂತಿದೆ. ‘ನಿಜ’ ಎನ್ನುವ ವಿಶೇಷಣಕ್ಕೆ ಕೃತಿಯಲ್ಲಿ ಮತ್ತೊಂದು ಅರ್ಥವೂ ಇದೆ. ಅದು, ವಿವೇಕಾನಂದರ ವ್ಯಕ್ತಿತ್ವವನ್ನು ಕುಬ್ಜಗೊಳಿಸುವ ಚೌಕಟ್ಟನ್ನು ಮುಕ್ತಗೊಳಿಸುವುದು ಹಾಗೂ ಈ ದೇಶ ಕಂಡ ಅಪೂರ್ವ ವ್ಯಕ್ತಿತ್ವವೊಂದನ್ನು ಪೂರ್ವಗ್ರಹಗಳಿಂದ ಹೊರತರುವುದು. ವಿವೇಕಾನಂದರ ಚಿಂತನೆಗಳನ್ನು ವರ್ತಮಾನದ ಕಣ್ಣಿನಲ್ಲಿ ನೋಡುವ ಹಾಗೂ ಅವರ ವ್ಯಕ್ತಿತ್ವವನ್ನು ವಿಸ್ತಾರಗೊಳಿಸುವ – ಎರಡೂ ಉದ್ದೇಶಗಳಲ್ಲಿ ನಾಗರಾಜ್ ಸಾಕಷ್ಟು ಯಶಸ್ವಿಯಾಗಿದ್ದಾರೆ. ಆ ಯಶಸ್ಸು ಕೃತಿಯ ಗೆಲುವೂ ಹೌದು.

‘ಹಿಂದೂ – ಹಾಗೆಂದರೇನು?’, ‘ವರ್ಣ, ಜಾತಿ, ಕುಲಗಳು ಭರತಖಂಡದ ಧರ್ಮವೇ?’, ‘ದಾರಿ ಯಾವುದಯ್ಯ ಭಾರತೀಯರ ಕಲ್ಯಾಣಕ್ಕೆ?’, ‘ಸನ್ಯಾಸ – ಹಾಗೆಂದರೇನು?’, ‘ಸೌಹಾರ್ದವೆಂದರೆ ವೈಮನಸ್ಯವೇ?’ – ಕೃತಿಯಲ್ಲಿನ ಅಧ್ಯಾಯಗಳ ಈ ಶೀರ್ಷಿಕೆಗಳೇ ಪುಸ್ತಕದ ಉದ್ದೇಶವನ್ನೂ ಸೂಚಿಸುವಂತಿವೆ. ವಿವೇಕಾನಂದರ ಬಗ್ಗೆ ಆಸಕ್ತಿಯುಳ್ಳವರು ಮಾತ್ರವಲ್ಲದೆ, ಸಾಮಾಜಿಕ ಸ್ವಾಸ್ಥ್ಯದ ಹಂಬಲವುಳ್ಳ ಎಲ್ಲರೂ ಗಮನಿಸಬೇಕಾದ ಕೃತಿಯಿದು.

ನಿಜದ ಕಣ್ಣಲ್ಲಿ ಸ್ವಾಮಿ ವಿವೇಕಾನಂದ ಲೇ:ಆನೂಡಿ ನಾಗರಾಜ್ ಪ್ರ: ಆನೂಡಿ ಪ್ರಕಾಶನ ಸಂ: 7619199779

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.