ನಿರುಪಮಾ– ರಾಜೇಂದ್ರ ಭರತನಾಟ್ಯ ಮತ್ತು ಕಥಕ್ ಪರಂಪರೆಗೆ ಹೊಸ ವ್ಯಾಖ್ಯಾನ ಬರೆದವರು. ವ್ಯಾಪಕತೆ ಹೆಚ್ಚಿಸಿದವರು. ಕಲಾ ಪ್ರಕಾರವನ್ನು ಸಂಘಟಿತ ಮತ್ತು ವೃತ್ತಿಪರವಾಗಿ ಬೆಳೆಸಿ ಮುನ್ನಡೆಸುತ್ತಿರುವವರು. ಸುಮಾರು 36 ವರ್ಷಗಳಿಗೂ ಮೀರಿದ ನೃತ್ಯ ಸಾಧನೆಯ ಬದುಕು ಇವರದ್ದು. ಸಾವಿರಾರು ಶಿಷ್ಯಂದಿರನ್ನು ರೂಪಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ನೃತ್ಯದ ಹೆಜ್ಜೆಗಳು ಮೂಡಿವೆ. ಕಥೆ ಹೇಳುವವರು (story tellers) ಎಂದೇ ಗುರುತಿಸಿಕೊಂಡಿರುವ ಈ ಕಲಾ ಜೋಡಿಯ ಹೆಜ್ಜೆಗಳು ಹೇಗಿವೆ? ಅವರ ಬದುಕೇನು? ಅವರು ಗಳಿಸಿದ್ದೇನು? ತ್ಯಾಗ ಮಾಡಿದ್ದೇನು? ಅಭಿನವ ಡ್ಯಾನ್ಸ್ ಕಂಪನಿಯ ಅಗ್ಗಳಿಕೆಗಳೇನು?...

ಹೀಗೆ ಹಲವು ಕುತೂಹಲಗಳಿಗೆ ಪ್ರಜಾವಾಣಿ ಸೆಲೆಬ್ರಿಟಿ ವಿಶೇಷ ಕಾರ್ಯಕ್ರಮ ಉತ್ತರಿಸುವ ಪ್ರಯತ್ನ ಮಾಡಿದೆ. ಒಂದಿಷ್ಟು ಪ್ರದರ್ಶನಗಳ ಝಲಕ್‌ಗಳೂ ಇಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.