ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಿಗೆ ಚಿರಪರಿಚಿತ ಹೆಸರು ತೀಸ್ತಾ ಸೆತಲ್ವಾಡ್. ಮುಂಬೈನ ವಕೀಲರ ಕುಟುಂಬಕ್ಕೆ ಸೇರಿದ ತೀಸ್ತಾ ಕಾನೂನು ಮತ್ತು ಸಂವಿಧಾನದ ಮೌಲ್ಯಗಳನ್ನೇ ಉಸಿರಾಗಿಸಿಕೊಂಡು ಬೆಳೆದವರು. ತೀಸ್ತಾ ನ್ಯಾಯದಾನಕ್ಕಾಗಿ ಆರಿಸಿ ಕೊಂಡಿದ್ದು ಪತ್ರಿಕೋದ್ಯಮವನ್ನು. ವೃತ್ತಿಯ ಆರಂಭ ದಲ್ಲೇ ಕೋಮುಗಲಭೆಯ ವರದಿಗಾರಿಕೆ ಮಾಡಬೇಕಾಗಿ ಬರುತ್ತದೆ. ಅಲ್ಲಿ ಕಂಡ ಮಾನವ ಹಕ್ಕುಗಳ ದಮನ, ದ್ವೇಷದ ರಾಜಕೀಯ, ರಾಜಸತ್ತೆಯ ದಮನಕಾರಿ ಪ್ರವೃತ್ತಿಗಳು ಅವರನ್ನು ಆಕ್ಟಿವಿಸ್ಟ್ ಆಗಿ ರೂಪಿಸುತ್ತದೆ.

ಪತ್ರಿಕೋದ್ಯಮದಲ್ಲೇ ಬಾಳ ಸಂಗಾತಿ ಜಾವೇದ್ ಆನಂದ್ ಅವರನ್ನೂ ಭೇಟಿ ಮಾಡುವ ತೀಸ್ತಾ ಮುಂದೆ ‘ಕಮ್ಯುನಲಿಸಂ ಕಾಂಬ್ಯಾಟ್’ ಪತ್ರಿಕೆ ಆರಂಭಿಸಿದರು. ಕೋಮುವಾದದ ವಿರುದ್ದ ಸಾಮಾಜಿಕ, ರಾಜಕೀಯ ಹಾಗೂ ಕಾನೂನು ಹೋರಾಟಗಳನ್ನು ನಡೆಸುತ್ತಾ ಬಂದಿರುವ ಪತ್ರಿಕೆಯು ಜಗತ್ತಿನಲ್ಲೇ ವಿಶಿಷ್ಟ ಎನ್ನಲಾಗಿದೆ.

1984 ಹಾಗೂ 1992-93 ಮುಂಬೈ ಗಲಭೆಗಳು, 2002ರ ಗುಜರಾತ್ ಹತ್ಯಾಕಾಂಡದಲ್ಲಿ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸುತ್ತಿರುವ ತೀಸ್ತಾ ಪ್ರಮುಖ ಮಾನವಹಕ್ಕು ಹೋರಾಟಗಾರ್ತಿ. ಸತತ ಹೋರಾಟದಿಂದ ಗುಜರಾತ್ ಹತ್ಯಾಕಾಂಡದಲ್ಲಿ 117 ಜನರಿಗೆ ಶಿಕ್ಷೆ ಯಾಗುವಂತೆ ಶ್ರಮವಹಿಸಿದವರು ತೀಸ್ತಾ. ಇವರ ಹೋರಾಟದಿಂದ ಎದೆಗುಂದಿದ ಗುಜರಾತ್ ಸರ್ಕಾರ ಇವರ ಮೇಲೆ ದೈಹಿಕ, ಮಾನಸಿಕ ಮತ್ತು ಕಾನೂನು ದಾಳಿಗಳನ್ನು ನಡೆಸಿದರೂ ಎದೆಗುಂದದೆ ನ್ಯಾಯಕ್ಕಾಗಿ ಹೋರಾಡುತ್ತಿರುವ ವ್ಯಕ್ತಿ ತೀಸ್ತಾ.

ತಮ್ಮ ಹೋರಾಟದ ಬದುಕನ್ನು ದಾಖಲಿಸಿರುವ ಹೊತ್ತಿಗೆಯೇ ‘ಸಂವಿಧಾನದ ಕಾಲಾಳು’ ಪುಸ್ತಕ. ಸಂವಹನ ಸಮಾಲೋಚಕಿ ಸತ್ಯಾ ಎಸ್. ಅವರು ಮೂಲ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.