ಬೆಂಗಳೂರು: ದೇಶದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಬಜಾಜ್ ಆಟೊ, ಎಲೆಕ್ಟ್ರಿಕ್ ಸ್ಕೂಟರ್ ಆದ ‘ಚೇತಕ್ 2901’ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಕೆಂಪು, ಬಿಳಿ, ಕಪ್ಪು, ನಿಂಬೆ ಹಳದಿ ಮತ್ತು ಅಜುರೆ ನೀಲಿ ಬಣ್ಣದಲ್ಲಿ ಈ ಸ್ಕೂಟರ್ ಲಭ್ಯವಿದೆ. ಬೆಂಗಳೂರಿನಲ್ಲಿ ಇದರ ಎಕ್ಸ್ ಷೋರೂಂ ಬೆಲೆಯು ₹95,998 ಆಗಿದೆ. ದೇಶದ 500ಕ್ಕೂ ಷೋರೂಂಗಳಲ್ಲಿ ಲಭ್ಯವಿದ್ದು, ಜೂನ್ 15ರಿಂದ ಗ್ರಾಹಕರು ಖರೀದಿಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

ಚೇತಕ್ ಸದೃಢವಾದ ಲೋಹದ ದೇಹ ಹಾಗೂ ಸುಧಾರಿತ ತಾಂತ್ರಿಕ ವೈಶಿಷ್ಟ್ಯಗಳಿಂದ ಕೂಡಿದೆ. ಐಇಸಿ ವಾಹನ ಹಾಗೂ ಎಲೆಕ್ಟ್ರಿಕ್ ವಾಹನ ಸವಾರರನ್ನು ಸೆಳೆಯುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 123 ಕಿ.ಮೀ. ದೂರ ಕ್ರಮಿಸಬಹುದಾಗಿದೆ ಎಂದು ಹೇಳಿದೆ.

ಸವಾರರು ನಿರೀಕ್ಷಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಉತ್ತಮ ಸವಾರಿಯ ಅನುಭವ ನೀಡಲಿದ್ದು, ಗ್ರಾಹಕರು ಹತ್ತಿರದ ಷೋರೂಂಗಳಿಗೆ ತೆರಳಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.