ಬೆಂಗಳೂರು: ವಿಲಾಸಿ ಕಾರು ತಯಾರಿಕಾ ಕಂಪನಿ ರೋಲ್ಸ್ ರಾಯ್ಸ್ ಭಾರತದಲ್ಲಿ ತನ್ನ ರೋಲ್ಸ್ ರಾಯ್ಸ್ ಕಲಿನನ್ ಸರಣಿ II ಅನ್ನು ಬಿಡುಗಡೆ ಮಾಡಿದೆ.

ಇದರ ಬೆಲೆ ₹10.50 ಕೋಟಿಯಿಂದ ಪ್ರಾರಂಭವಾಗಲಿದೆ. ಬ್ಲಾಕ್ ಬ್ಯಾಡ್ಜ್ ಕಲಿನನ್ ಸರಣಿ II ಬೆಲೆ ₹12.25 ಕೋಟಿಯಿಂದ ಪ್ರಾರಂಭಗೊಳ್ಳುತ್ತದೆ. ಈ ಕಾರುಗಳನ್ನು ರೋಲ್ಸ್ ರಾಯ್ಸ್ ಕಾರ್ಸ್ ಚೆನ್ನೈ ಮತ್ತು ರೋಲ್ಸ್ ರಾಯ್ಸ್ ದೆಹಲಿಯಲ್ಲಿ ಖರೀದಿಸಬಹುದಾಗಿದೆ. ಮೊದಲ ಸ್ಥಳೀಯ ಗ್ರಾಹಕರ ಡೆಲಿವರಿಗಳು ಡಿಸೆಂಬರ್ ತ್ರೈಮಾಸಿಕದಲ್ಲಿ ಪ್ರಾರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

‘ವಿಶ್ವದ ಮೊದಲ ಸೂಪರ್ ಲಕ್ಷುರಿ ಎಸ್‌ಯುವಿ ಒರಿಜಿನಲ್ ಕಲಿನನ್ 2018ರಲ್ಲಿ ಬಿಡುಗಡೆಯಾಗಿತ್ತು. ಅದು ತನ್ನ ವಿಶಿಷ್ಟತೆಯಿಂದ ಗ್ರಾಹಕರ ಗಮನ ಸೆಳೆದಿತ್ತು.

ಭಾರತದಲ್ಲಿ ಕಲಿನನ್ II ಸರಣಿ ಬಿಡುಗಡೆ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ರೋಲ್ಸ್ ರಾಯ್ಸ್‌ಗೆ ಮಹತ್ತರ ಮೈಲುಗಲ್ಲಾಗಿದೆ. ಈ ಕಾರು ಯುವಕರು ಮತ್ತು ಹೆಚ್ಚು ಗ್ರಾಹಕರನ್ನು ಸೆಳೆದಿದೆ. ಕಲಿನನ್ ಸರಣಿ II ಹೊಸ ತಂತ್ರಜ್ಞಾನಗಳು, ಹೊಸ ಸಾಮಗ್ರಿಗಳು, ಡಿಸೈನ್ ಅಪ್‌ಡೇಟ್‌ಗಳನ್ನು ಒಳಗೊಂಡಿದೆ’ ಎಂದು ರೋಲ್ಸ್ ರಾಯ್ಸ್ ಮೋಟರ್ ಕಾರುಗಳ ಏಷ್ಯಾ ಪೆಸಿಫಿಕ್‌ನ ಪ್ರಧಾನ ನಿರ್ದೇಶಕ ಇರೇನ್ ನಿಕ್ಕೇನ್ ತಿಳಿಸಿದ್ದಾರೆ.

ವಿನ್ಯಾಸಕಾರರು, ಎಂಜಿನಿಯರ್‌ಗಳು ಮತ್ತು ಕುಶಲಿಗರು ಗ್ರಾಹಕರ ಅಭಿಪ್ರಾಯದ ಮೇಲೆ ಶ್ರಮಿಸಿ ವಿಶ್ವದ ಬ್ರಾಂಡ್ ಕಚೇರಿಗಳಿಂದ ಮಾಹಿತಿ ಪಡೆದು ಕಲಿನನ್ ಸುಧಾರಣೆಗೆ ಹೊಸ ತಂತ್ರಜ್ಞಾನ ರೂಪಿಸಿದ್ದಾರೆ. ಇದು ರೋಲ್ಸ್ ರಾಯ್ಸ್ ಇತಿಹಾಸದಲ್ಲಿಯೇ ಅತ್ಯಂತ ವಿಸ್ತಾರ ಸರಣಿ ಇದಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.