ನವದೆಹಲಿ: ದೇಶದಲ್ಲಿ ರಸ್ತೆ ಸುರಕ್ಷತೆ ಮತ್ತು ವಾಹನಗಳಲ್ಲಿ ಸೀಟ್ ಬೆಲ್ಟ್ ಹಾಗೂ ಸುರಕ್ಷಾ ಉಪಕರಣಗಳ ಬಳಕೆ ಕಡ್ಡಾಯಕ್ಕೆ ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ಸೀಟ್ ಬೆಲ್ಟ್ ಧರಿಸುವಂತೆ ಸೂಚನೆ ನೀಡುವ ಅಲಾರ್ಮ್ ಅನ್ನು ಬಂದ್ಮಾಡಿಡಬಹುದಾದಂತಹ ಉಪಕರಣ ಮಾರಾಟವನ್ನು ಅಮೆಜಾನ್ ಸ್ಥಗಿತಗೊಳಿಸಿದೆ.

ಆನ್ಲೈನ್ ಮೂಲಕ ಲಭ್ಯವಿದ್ದ ಅಲಾರ್ಮ್ ಬ್ಲಾಕ್ ಉಪಕರಣಗಳನ್ನು ಕಂಪನಿಮಾರುಕಟ್ಟೆಯಿಂದ ಹಿಂಪಡೆದಿದೆ.

ಕಾರು ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸದೇ ಪ್ರಯಾಣ ಮಾಡುವುದು ಮತ್ತು ಸೀಟ್ ಬೆಲ್ಟ್ ಅಲಾರ್ಮ್ ಅನ್ನು ನಿಲ್ಲಿಸುವ ಸಲುವಾಗಿ ಬ್ಲಾಕರ್ ಉಪಕರಣ ಬಳಸುವುದು ಮಾಡುತ್ತಿದ್ದರು.

ಅವುಗಳ ಬಳಕೆಯಿಂದ, ವಾಹನದಲ್ಲಿ ಸೀಟ್ ಬೆಲ್ಟ್ ಅಲಾರ್ಮ್ ಬಡಿದುಕೊಳ್ಳುವುದನ್ನು ನಿಲ್ಲಿಸಲಾಗುತ್ತಿತ್ತು. ಎಚ್ಚರಿಕೆಯನ್ನು ನಿರ್ಲಕ್ಷಿಸಿ ಜನರು ಜೀವಕ್ಕೆ ಅಪಾಯ ತಂದುಕೊಳ್ಳುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಹಿಂಬದಿ ಸೀಟು ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ ಮಾಡಲು ಮುಂದಾಗಿದೆ.

ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ: ಸಾಮಾನ್ಯ ಸಾಧನೆಯಲ್ಲ ಎಂದ ಮೋದಿ

ಅಂತಹ ಉಪಕರಣಗಳ ಮಾರಾಟವನ್ನು ಅಮೆಜಾನ್ ಸ್ಥಗಿತಗೊಳಿಸಿದ್ದು, ಪ್ರಯಾಣಿಕರ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳುವ ಅಂತಹ ಉಪಕರಣಗಳನ್ನು ಮಾರಾಟ ಮಾಡದಿರಲು ನಿರ್ಧರಿಸಿದೆ.

ಮಿಸ್ತ್ರಿ ಸ್ನೇಹಿತ ಡೇರಿಯಸ್ ಪಾಂಡೋಲೆಗೆ ಶಸ್ತ್ರಚಿಕಿತ್ಸೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.