ಭಾರತದ ರಸ್ತೆಗಳನ್ನು ಬೆಂಜ್ ಕಾರುಗಳು ಅಲಂಕರಿಸಿ, 2019ಕ್ಕೆ 25 ವರ್ಷ ಪೂರ್ಣಗೊಳ್ಳುತ್ತದೆ. ಈ ಖುಷಿಯಲ್ಲಿರುವ ಈ ಜರ್ಮನ್ ವಾಹನ ತಯಾರಿಕಾ ಕಂಪನಿಯು, ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿಯೂ ಸದ್ದು ಮಾಡಲು ಸಿದ್ಧವಾಗಿದೆ.

25 ವರ್ಷಗಳಲ್ಲಿ 25 ಬ್ರ್ಯಾಂಡ್ಗಳ ಮೂಲಕ ಭಾರತೀಯರಿಗೆ ವಿಭಿನ್ನ ಬಗೆಯ ಪ್ರಯಾಣ ಅನುಭವವನ್ನು ಸಂಸ್ಥೆ ನೀಡಿದೆ. ಈ ಐಷಾರಾಮಿ ವಾಹನ ಈಗ ಎರಡು ಮತ್ತು ಮೂರನೇ ಹಂತದ (ಟಯರ್ 2 ಮತ್ತು ಟಯರ್ 3) ನಗರಗಳ ಮಾರುಕಟ್ಟೆಯನ್ನೂ ಪ್ರವೇಶಿಸಲಿದೆ.

ಬ್ರ್ಯಾಂಡ್ ಪ್ರಚಾರ ಪಯಣದ ಮೂರನೇ ಆವೃತ್ತಿಯು ಗುಜರಾತ್ನ ಗಾಂಧಿಧಾಮ ಮತ್ತು ಆನಂದದಲ್ಲಿ ಪ್ರಾರಂಭವಾಗಿದೆ. ತಮ್ಮ, ತಮ್ಮ ನಗರಗಳಲ್ಲಿಯೇ ಬೆಂಜ್ನ ಪರೀಕ್ಷಾರ್ಥ ಚಾಲನೆಯ ಅವಕಾಶ ಭಾರತೀಯರಿಗೆ ಸಿಗಲಿದೆ.

ಕಂಪನಿಯ ಎಲ್ಲ ವಿಧದ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳ (ಎಸ್ಯುವಿ) ಪ್ರದರ್ಶನ, ವಿಶೇಷ ರಿಯಾಯ್ತಿಗಳು, ಖರೀದಿ ನಂತರದ ಕೊಡುಗೆಗಳು, ವಿಶೇಷ ಆಫರ್ಗಳ ಬಗ್ಗೆಯೂ ಕಂಪನಿಯ ಸಿಬ್ಬಂದಿ ಮಾಹಿತಿ ನೀಡಲಿದ್ದಾರೆ.

‘ವಿತ್ ಬೆಸ್ಟ್ - ನೆವರ್ ರೆಸ್ಟ್’ ಎನ್ನುವ ಘೋಷವಾಕ್ಯದೊಂದಿಗೆ ಈ ವರ್ಷದಲ್ಲಿ ನಾವು ಭಾರತದ ಎರಡು- ಮೂರನೇ ಹಂತದ ನಗರಗಳನ್ನು ಪ್ರವೇಶಿಸುತ್ತಿದ್ದೇವೆ. ಈ ನಗರಗಳ ಗ್ರಾಹಕರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿಯೂ ನಮ್ಮ ಬದ್ಧತೆ ಮೊದಲಿನಂತೆಯೇ ಮುಂದುವರಿಯುತ್ತದೆ. ಗ್ರಾಹಕ ಕೇಂದ್ರಿತ ಸೇವೆಗೆ ಮರ್ಸಿಡಿಸ್ ಬೆಂಜ್ ಅನ್ವರ್ಥನಾಮವಾಗಿದೆ. ಈ ‘ಬ್ರ್ಯಾಂಡ್ ಟೂರ್’ ಮೂಲಕ ನಾವು ಹೆಚ್ಚು ಗ್ರಾಹಕರನ್ನು ತಲುಪಲಿದ್ದೇವೆ. ಮೆಟ್ರೊ ನಗರಗಳಾಚೆಗಿನ ಇತರ ಸಣ್ಣ – ಪುಟ್ಟ ನಗರಗಳಿಗೂ ತೆರಳಿ ನಮ್ಮ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಿದ್ದೇವೆ. ನಮ್ಮ ಉತ್ಪನ್ನಗಳಿಗೆ ಇರುವ ಬೇಡಿಕೆ ಮತ್ತು ಆ ನಗರದ ಮಾರುಕಟ್ಟೆ, ಅವಕಾಶಗಳನ್ನು ಗಮನಿಸುತ್ತಿದ್ದೇವೆ. ರೆಗ್ಯುಲರ್ ಷೋರೂಂ ಹೊಂದಿರುವ ಎಲ್ಲ ಲಕ್ಷಣಗಳು ಅಂದರೆ, ಬ್ರ್ಯಾಂಡಿಂಗ್, ಆಡಿಯೊ ವಿಷುವಲ್ಸ್ ಅಂಶಗಳು ಬ್ರ್ಯಾಂಡ್ ಟೂರ್ನಲ್ಲಿ ಗ್ರಾಹಕರಿಗೆ ಸಿಗಲಿವೆ’ ಎಂದು ಮರ್ಸಿಡಿಸ್ ಬೆಂಜ್ನ ಭಾರತ ಸಿಇಒ ಮಾರ್ಟಿನ್ ಶ್ವೆಂಕ್ ಹೇಳುತ್ತಾರೆ.

ಬೆಂಜ್ನ ವೈಶಿಷ್ಟ್ಯಗಳು, ಸಾಮರ್ಥ್ಯ, ರೇಂಜ್ ಎಲ್ಲದರ ಮಾಹಿತಿಯೂ ಈ ಪ್ರವಾಸದ ವೇಳೆ ಗ್ರಾಹಕರಿಗೆ ಸಿಗುತ್ತದೆ. ಬೆಂಜ್ ಕಾರ್ನ ಟೆಸ್ಟ್ ಡ್ರೈವ್ ಕೂಡ ಮಾಡಬಹುದು.

2016ರಲ್ಲಿ 'ಮೈ ಮರ್ಸಿಡಿಸ್, ಮೈ ಸರ್ವೀಸ್', 2017ರಲ್ಲಿ 'ಪಿಟ್ ಸ್ಟಾಪ್ ಸರ್ವೀಸ್' ಯೋಜನೆಗಳ ಮೂಲಕ ಕಂಪನಿ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿತ್ತು. ಈ ಉಪಕ್ರಮಗಳಿಂದಾಗಿ, 2018ರಲ್ಲಿ ಜೆಡಿ ಪವರ್ ಮಾರಾಟ ತೃಪ್ತಿ ಸೂಚ್ಯಂಕ (ಎಸ್ ಎಸ್ಐ), ಗ್ರಾಹಕ ತೃಪ್ತಿ ಸೂಚ್ಯಂಕದಲ್ಲಿ (ಸಿಎಸ್ಐ) ಮರ್ಸಿಡಿಸ್ ಬೆಂಜ್ 903 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿತ್ತು.

ಭಾರತದಲ್ಲಿ ಬೆಂಜ್ ಹಾದಿ

ಮರ್ಸಿಡಿಸ್ ಬೆಂಜ್ ಇಂಡಿಯಾ 1994ರಲ್ಲಿ ಸ್ಥಾಪನೆಯಾಯಿತು. 130 ವರ್ಷಗಳ ಸಾರ್ಥಕ ಇತಿಹಾಸ ಹೊಂದಿರುವ ಬೆಂಜ್ಗೆ ಭಾರತದಲ್ಲಿ ಈಗ ರಜತ ಮಹೋತ್ಸವ ಸಂಭ್ರಮ. ಐಷಾರಾಮಿ ವಾಹನಗಳ ಉತ್ಪಾದನೆಗೆ ಜಗತ್ತಿನಲ್ಲಿಯೇ ಹೆಸರುವಾಸಿಯಾಗಿರುವ ಕಂಪನಿ ಭಾರತದಲ್ಲಿಯೂ ಜನರ ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

2009ರಲ್ಲಿ ಪುಣೆ ಬಳಿಯ ಚಾಕಣ್ ಎಂಬಲ್ಲಿ ವಿಶ್ವದರ್ಜೆಯ ತಯಾರಿಕಾ ಘಟಕ ನಿರ್ಮಿಸಿತು. ಘಟಕದ ಸಾಮರ್ಥ್ಯ ವಿಸ್ತರಿಸಿಕೊಳ್ಳುತ್ತಾ ಬಂದಿರುವ ಬೆಂಜ್, ಸದ್ಯ ಭಾರತದಲ್ಲಿ ₹2,200 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ತಯಾರಿಕಾ ವಹಿವಾಟು ಮುಂದುವರಿಸಿಕೊಂಡು ಬರುತ್ತಿದೆ. ಭಾರತದಲ್ಲಿ ಇಷ್ಟು ದೊಡ್ಡ ಮೊತ್ತದ ಬಂಡವಾಳ ಹೂಡಿ ಕಾರ್ಯನಿರ್ಹಿಸುತ್ತಿರುವ ಅತಿದೊಡ್ಡ ಐಷಾರಾಮಿ ಕಾರು ತಯಾರಿಕಾ ಕಂಪನಿ ಎನ್ನುವ ಹೆಗ್ಗಳಿಕೆ ಇದರದ್ದು. ದೇಶದಲ್ಲಿ ಅತಿದೊಡ್ಡ ಮಾರಾಟ ಜಾಲ ಹೊಂದಿರುವ ಆಟೊಮೊಬೈಲ್ ಕಂಪನಿಯೂ ಹೌದು.

ಸ್ಥಳೀಯವಾಗಿ ತಯಾರಿಕೆ

ಮರ್ಸಿಡಿಸ್ ಮೇಬ್ಯಾಕ್ ಎಸ್ 560, ಎಸ್ ಕ್ಲಾಸ್, ಇ- ಕ್ಲಾಸ್ ಲಾಂಗ್ ವೀಲ್ ಬೇಸ್, ಸಿ-ಕ್ಲಾಸ್, ಸಿಎಲ್ಎ ಲಕ್ಸುರಿ ಸೆಡಾನ್ಗಳು ಹಾಗೂ ಜಿಎಲ್ಎ, ಜಿಎಲ್ಇ ಮತ್ತು ಜಿಎಲ್ಎಸ್ ಲಕ್ಸುರಿ ಎಸ್ಯುವಿ.

ಮರ್ಸಿಡಿಸ್ ಬೆಂಜ್: ಏಕೆ ಬೆಸ್ಟ್ ?

ಬಯಸಿದ್ದು ಲಭ್ಯ: ಹೊಸ ಕಾರು ಕೊಳ್ಳಲು ನೀವು ನಿರ್ಧರಿಸಿದರೆ, ನೀವು ಬಯಸುವ ಮಾಡೆಲ್, ಬಣ್ಣ, ಎಂಜಿನ್ ಕಾನ್ಫಿಗರೇಷನ್ ಮತ್ತು ಇತರೆ ಯಾವುದೇ ಹೆಚ್ಚುವರಿ ಆಯ್ಕೆಗಳು ಇಲ್ಲಿ ಸಿಗುತ್ತವೆ.

ಬೇಸಿಕ್ ಮಾದರಿ ಆಗಿರಬಹುದು. ಐಷಾರಾಮಿ ಅಥವಾ ಸ್ಪೋರ್ಟ್ಸ್ ಮಾದರಿ ಆದರೂ ಬೆಂಜ್ನಲ್ಲಿ ನಿಮಗೆ ಆಯ್ಕೆಗಳಿವೆ.

ಸಿ-ಕ್ಲಾಸ್ ಕಾರು ಕೊಳ್ಳೋದಕ್ಕೆ ನೀವು ಬಯಸಿದರೆ, ಇದರಲ್ಲೇ ನಿಮಗೆ ಐದು ಭಿನ್ನ ಆಯ್ಕೆಗಳು ಲಭ್ಯ ಇವೆ.
ಕಾರಿನ ಬಣ್ಣ, ಟೈರ್ಗಳ ಗಾತ್ರ, ವಾಹನ ಒಳಗಿನ ವಿನ್ಯಾಸ, ಸೌಂಡ್ ಸಿಸ್ಟಮ್, ಸ್ಟೀರಿಂಗ್ ವೀಲ್ ಕೂಡ ನಿಮಗೆ ಬೇಕಾದಂತೆ ಆಯ್ಕೆ ಮಾಡಿಕೊಳ್ಳಬಹುದು.

ಇದಲ್ಲದೆ, ತಂತ್ರಜ್ಞಾನ ಪ್ಯಾಕೇಜ್ನಲ್ಲಿಯೂ ಸಾಕಷ್ಟು ಆಯ್ಕೆಗಳಿವೆ. ಪಾರ್ಕಿಂಗ್ ನೆರವು, ಸೇಫ್ ಬ್ರೇಕಿಂಗ್ ವ್ಯವಸ್ಥೆಯೂ ಇಲ್ಲಿದೆ.

ವಾರಂಟಿ ಮತ್ತು ಸರ್ವೀಸ್: ವಾಹನ ತಯಾರಕರಿಂದ ಬದ್ಧತೆ ಮತ್ತು ಬೆಂಬಲದ ಲಾಭವನ್ನು ಇಲ್ಲಿ ಗ್ರಾಹಕರು ಪಡೆದುಕೊಳ್ಳಬಹುದು. ನಿಮ್ಮ ಕಾರಿಗೆ ಏನೇ ಆದರೂ, ಅದರ ರಕ್ಷಣೆಯನ್ನು ಕಂಪನಿ ನೀಡುತ್ತದೆ. ಇದರ ಜೊತೆಗೆ, ಸಾಫ್ಟ್ವೇರ್ ಅಪ್ಡೇಟ್ಸ್, ರಿಕಾಲ್, ಸರ್ವೀಸ್, ನಿರ್ವಹಣೆಯಂತಹ ಸೇವೆಗಳು ದೊರೆಯುತ್ತವೆ.
ನಿರ್ದಿಷ್ಟ ಅವಧಿಯವರೆಗೆ (ನಾಲ್ಕು ವರ್ಷ ಅಥವಾ 50,000 ಮೈಲು) ವಾರಂಟಿ ಲಭ್ಯವಿರುತ್ತದೆ. ಅಂದರೆ, ನಿಮ್ಮ ಕಾರಿನ ಯಾವುದೇ ಬಿಡಿಭಾಗದ ಕಾರ್ಯನಿರ್ವಹಣೆ ಸ್ಥಗಿತವಾದರೆ, ಸರ್ವೀಸ್ ಅಗತ್ಯವಾಗಿದ್ದರೆ ಈ ಅವಧಿಯಲ್ಲಿ ಆ ಸಾಧನ ಅಥವಾ ಸೇವೆ ನಿಮಗೆ ಉಚಿತವಾಗಿ ದೊರೆಯುತ್ತದೆ.

ಇಂಧನ ಕ್ಷಮತೆ ಮತ್ತು ಸುರಕ್ಷಾ ಸೌಲಭ್ಯ: ಸುಧಾರಿತ ಎಂಜಿನ್ ಕ್ಷಮತೆ, ಕಾರ್ಯನಿರ್ವಹಣೆ ಮತ್ತು ಸುರಕ್ಷತೆಗೆ ಬೆಂಜ್ ಆದ್ಯತೆ ನೀಡುತ್ತದೆ. ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿರುವ ಎಲ್ಲ ನಿಯಮಗಳನ್ನು ತಮ್ಮ ಉತ್ಪನ್ನಗಳಲ್ಲಿ ಅಳವಡಿಸಿಕೊಂಡು ಪಾಲಿಸುತ್ತಿದೆ. ಹೀಗಾಗಿ, ಭಾರತದ ರಸ್ತೆಗಳಲ್ಲಿ ಸಂಚರಿಸುತ್ತಿರುವ ಅತಿ ಸುರಕ್ಷಿತ ವಾಹನಗಳಲ್ಲಿ ಬೆಂಜ್ಗೆ ಮಹತ್ವದ ಸ್ಥಾನವಿದೆ ಎಂದು ಸಂಸ್ಥೆ ಹೇಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.