ನವದೆಹಲಿ: ರೇಡಿಯೊ ಟ್ಯಾಕ್ಸಿ ಸೇವೆ ಒದಗಿಸುವ ಸಂಸ್ಥೆ ಓಲಾ, ದೇಶದಲ್ಲಿ ಬಳಸಿದ ಕಾರುಗಳ ಉದ್ಯಮವನ್ನು ಸ್ಥಗಿತಗೊಳಿಸಲು ಮುಂದಾಗಿದೆ.

ಓಲಾ ಕಾರ್ಸ್ ಸೇವೆಯನ್ನು ಆರಂಭಿಸಿದ ಒಂದು ವರ್ಷದಲ್ಲಿಯೇ ಸ್ಥಗಿತಗೊಳಿಸುತ್ತಿದ್ದು, ಮುಂದೆ ಎಲೆಕ್ಟ್ರಿಕ್ ಕಾರು ಮತ್ತು ಬೈಕ್ ತಯಾರಿಕೆ ಕ್ಷೇತ್ರದತ್ತ ಗಮನ ಹರಿಸಲಿದೆ.

ಈ ಮೊದಲು ಓಲಾ ಆರಂಭಿಸಿದ್ದ ಓಲಾ ಕೆಫೆ, ಫುಡ್‌ಪಾಂಡ, ಓಲಾ ಫುಡ್ಸ್ ಉದ್ಯಮವನ್ನು ಸ್ಥಗಿತಗೊಳಿಸಿತ್ತು. ಈ ಬಾರಿ ಓಲಾ ಡ್ಯಾಶ್ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ.

ಪ್ರಸಕ್ತ ಮಾರುಕಟ್ಟೆಗೆ ಅನುಗುಣವಾಗಿ ಓಲಾ ಈ ನಿರ್ಧಾರಕ್ಕೆ ಮುಂದಾಗಿದ್ದು, ಎಲೆಕ್ಟ್ರಿಕ್ ಕಾರು ಮತ್ತು ಬೈಕ್ ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆಗೆ ಮುಂದಾಗಿದೆ.

2023ರ ಏಪ್ರಿಲ್ 1ರಿಂದ ದೇಶದಲ್ಲೇ ಹೊಸ ಕಾರುಗಳ ಕ್ರ್ಯಾಷ್ ಟೆಸ್ಟ್

ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ನಂತರದ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಓಲಾ ಹೇಳಿದೆ.

ಕ್ರಾಶ್ ಟೆಸ್ಟ್ ಆಧರಿಸಿ ವಾಹನಗಳಿಗೆ ರ್ಯಾಂಕಿಂಗ್: ಗಡ್ಕರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.