ನವದೆಹಲಿ: ಪ್ರಸ್ತಕ ಆರ್ಥಿಕ ವರ್ಷದಲ್ಲಿ ದೇಶ ಮತ್ತು ವಿದೇಶಗಳಲ್ಲಿ ಸರ್ಕಾರಿ ನೌಕರರ ತರಬೇತಿಗಾಗಿ ಕೇಂದ್ರ ಸಿಬ್ಬಂದಿ ಸಚಿವಾಲಯಕ್ಕೆ ₹309.74 ಕೋಟಿ ಅನುದಾನವನ್ನು ಕೇಂದ್ರ ಬಜೆಟ್ನಲ್ಲಿ ಮೀಸಲಿಡಲಾಗಿದೆ.

ಈ ಮೊತ್ತವು ಪ್ರಸಕ್ತ ಹಣಕಾಸು ವರ್ಷದಲ್ಲಿ ಸಿಬ್ಬಂದಿ ಸಚಿವಾಲಯಕ್ಕೆ ಮಂಜೂರಾಗಿರುವ ₹2,328 ಕೋಟಿ ಅಡಿಯಲ್ಲೆ ಬರುತ್ತದೆ.

ಒಟ್ಟು ₹309.74 ಕೋಟಿ ಅನುದಾನದಲ್ಲಿ ತರಬೇತಿ ವಿಭಾಗ, ಇನ್ಸ್ಟಿಟ್ಯೂಟ್ ಆಫ್ ಸೆಕ್ರೆಟರಿಯೇಟ್ ಟ್ರೈನಿಂಗ್ ಅಂಡ್ ಮ್ಯಾನೇಜ್ಮೆಂಟ್ (ಐಎಸ್ಟಿಎಂ) ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ನಿರ್ವಹಣಾ ಅಕಾಡೆಮಿಗೆ ₹103.05 ಕೋಟಿ, ತರಬೇತಿ ಯೋಜನೆಗಳಿಗೆ ₹120.56 ಕೋಟಿ ಹಾಗೂ ಮಿಷನ್ ಕರ್ಮಯೋಗಿ ಅಥವಾ ನಾಗರಿಕ ಸೇವೆಗಳ ಸಾಮರ್ಥ್ಯ ನಿರ್ಮಾಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮಕ್ಕಾಗಿ ₹86.13 ಕೋಟಿಯನ್ನು ನಿಗದಿಗೊಳಿಸಲಾಗಿದೆ ಎಂದು ಬಜೆಟ್ ಮಂಡನೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಮಿಷನ್ ಕರ್ಮಯೋಗಿ ಯೋಜನೆಯು ಸರ್ಕಾರಿ ಉದ್ಯೋಗಿಗಳನ್ನು ಹೆಚ್ಚು ಸೃಜನಶೀಲ, ವೃತ್ತಿಪರ ಮತ್ತು ಕೌಶಲ್ಯಯುಕ್ತರನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ವಿದೇಶಗಳಲ್ಲಿ ತರಬೇತಿ ಪಡೆಯಲು ಧನಸಹಾಯ, ಸರ್ಕಾರಿ ಕಚೇರಿಗಳ ಆಧುನೀಕರಣ, ಇ–ಆಡಳಿತದ ಪ್ರಚಾರ ಮತ್ತು ಪ್ರೋತ್ಸಾಹ ಇತ್ಯಾದಿಗಳಿಗಾಗಿ ಈ ಮೊತ್ತವನ್ನು ಮೀಸಲಿಡಲಾಗಿದೆ ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ.
.ದೇಶಕ್ಕಾಗಿ ಅಲ್ಲ; ಬಿಹಾರ, ಆಂಧ್ರಕ್ಕಾಗಿ ಬಜೆಟ್ ಮಂಡನೆ: NCPಯ ಶರದ್ ಪವಾರ್ ಬಣ.'ಕುರ್ಚಿ ಉಳಿಸಿ', 'ಕಾಪಿ-ಪೇಸ್ಟ್' ಬಜೆಟ್: ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.