ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

VIDEO | ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳಲು ಪ್ರೇರೇಪಿಸಿದ ಬಜೆಟ್‌

Published 23 ಜುಲೈ 2024, 13:42 IST
Last Updated 23 ಜುಲೈ 2024, 13:42 IST
ಅಕ್ಷರ ಗಾತ್ರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2024-25ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಮಂಗಳವಾರ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಮಾಡಿರುವ ಪ್ರಮುಖ ಘೋಷಣೆ ಅಂದರೆ, ಸ್ಟ್ಯಾಂಡರ್ಡ್‌ ಡಿಡಕ್ಷನ್‌ನ ಮಿತಿ ಏರಿಸಿರುವುದು. ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮಿತಿಯನ್ನು ಶೇ 50ರಷ್ಟು ಹೆಚ್ಚಿಸಲಾಗಿದೆ. ಅಂದರೆ, ಈವರೆಗೆ ₹50 ಸಾವಿರದವರೆಗೆ ಇದ್ದ ಈ ಮಿತಿಯನ್ನು ಈ ಬಜೆಟ್‌ನಲ್ಲಿ 75 ಸಾವಿರ ರೂಪಾಯಿಗೆ ಏರಿಸಲಾಗಿದೆ. ಅಂದರೆ, ವೇತನದಾರರು, ತೆರಿಗೆಗೆ ಒಳಪಡುವ ತಮ್ಮ ಆದಾಯದಲ್ಲಿ 75 ಸಾವಿರದವರೆಗೆ ಸ್ಯಾಂಡರ್ಡ್‌ ಡಿಡಕ್ಷನ್‌ ಎಂದು ತೋರಿಸಿಕೊಳ್ಳಬಹುದು. ಇದರಿಂದ ವೇತನದಾರರು ವರ್ಷಕ್ಕೆ ₹17,500ವರೆಗೆ ಉಳಿಸಬಹುದಾಗಿದೆ. ಮುಖ್ಯವಾಗಿ, ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಂಡವರಿಗೆ ಇದರ ಲಾಭ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT