ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಗಾಯದ ಮೇಲೆ ಬರೆ ಎಂಬಂತೆ, ಕೇಂದ್ರೀಯತೆರಿಗೆಯಲ್ಲಿ ದೊರೆಯುವ ಪಾಲಿನಲ್ಲೂ ₹ 9 ಸಾವಿರ ಕೋಟಿಯಷ್ಟು ಕಡಿತವಾಗುವ ಆತಂಕ ಎದುರಾಗಿದೆ. ಇದು ರಾಜ್ಯದ 2020–21ನೇ ಸಾಲಿನ ಬಜೆಟ್ ತಯಾರಿಯ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ.

ರಾಜ್ಯ ಕಳೆದುಕೊಳ್ಳಬಹುದಾದ ಕೇಂದ್ರದ ಪಾಲು ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದು ₹ 11 ಸಾವಿರ ಕೋಟಿಯವರೆಗೂ ಏರಬಹುದು ಎಂದೂ ಹೇಳಲಾಗುತ್ತಿದೆ.

‘ಈ ಬಾರಿ ರಾಜ್ಯ ಪಡೆಯುವ ಪಾಲಿನಲ್ಲಿ ₹ 9 ಸಾವಿರದಷ್ಟು ಕಡಿಮೆಯಾಗುವ ಸಾಧ್ಯತೆಯಂತೂ ಇದೆ’ ಎಂದು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ಹೇಳಿದರು.

ಜಿಎಸ್ಟಿ ಸಂಗ್ರಹ ಸಮರ್ಪಕವಾಗಿ ಆಗದ ಕಾರಣ ಕೇಂದ್ರದಿಂದ ರಾಜ್ಯಕ್ಕೆ ಪರಿಹಾರ ರೂಪದಲ್ಲಿ ಸಿಗಬೇಕಾದ ಹಣದಲ್ಲಿ ಕಡಿತ ಉಂಟಾಗಿದೆ. ಅದು ರಾಜ್ಯದ ಚಿಂತೆ ಹೆಚ್ಚಿಸಿರುವಂತೆಯೇ ಕೇಂದ್ರೀಯ ತೆರಿಗೆಯ ಪಾಲಿಗೂ ಸಂಚಕಾರ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.