ನವದೆಹಲಿ: ಇನ್ನು ಮುಂದೆ ಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಜತೆಗೇ, ವಿಳಾಸ, ಗುರುತು ಪರಿಷ್ಕರಣೆಗೆ ಏಕ ವ್ಯವಸ್ಥೆ ಜಾರಿಗೆ ತರುವುದಾಗಿಯೂ ಅವರು ಘೋಷಿಸಿದ್ದಾರೆ.

2023-24ರ ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಬುಧವಾರ ಮಂಡಿಸಿದರು.

‘ಸರ್ಕಾರವು ರಾಷ್ಟ್ರೀಯ ದತ್ತಾಂಶ (ಡೇಟಾ) ಆಡಳಿತ ನೀತಿಯನ್ನು ತರಲಿದೆ. ಇದು ವೈಯಕ್ತಿಕ ಡೇಟಾವನ್ನು ಅನಾಮಧೇಯಗೊಳಿಸುವಾಗ ಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಡಿಜಿಟಲ್ ಇಂಡಿಯಾದ ಅಗತ್ಯತೆಗಳಿಗೆ ಅನುಗುಣವಾಗಿ ಕೆವೈಸಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಹಣಕಾಸು ವಲಯದ ನಿಯಂತ್ರಕರನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ನಿರ್ಮಲಾ ತಿಳಿಸಿದರು.

ವಿವಿಧ ಸರ್ಕಾರಿ ಏಜೆನ್ಸಿಗಳು, ನಿಯಂತ್ರಕರು ಮತ್ತು ನಿಯಂತ್ರಿತ ಘಟಕಗಳಿಂದ ನಿರ್ವಹಿಸಲ್ಪಡುವ ನಾಗರಿಕರ ಗುರುತು ಮತ್ತು ವಿಳಾಸವನ್ನು ಪರಿಷ್ಕರಿಸಲು ಮತ್ತು ನವೀಕರಿಸಲು ಡಿಜಿಲಾಕರ್ ಸೇವೆಯನ್ನು ಬಳಸಲಾಗುವುದು. ಆಧಾರ್ ಅನ್ನು ಇದಕ್ಕೆ ಮೂಲ ದಾಖಲೆಯಾಗಿ ಬಳಸಲಾಗುತ್ತದೆ ಎಂದು ನಿರ್ಮಲಾ ಬಜೆಟ್‌ನಲ್ಲಿ ಹೇಳಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆಗಾಗಿ ಮೂರು ಕೇಂದ್ರಗಳನ್ನು ಸ್ಥಾಪಿಸುವುದಾಗಿಯೂ ಅವರು ಇದೇ ವೇಳೆ ತಿಳಿಸಿದರು.

ಎನ್‌ಎಚ್‌ಬಿ (ನ್ಯಾಷನಲ್ ಹೌಸಿಂಗ್ ಬ್ಯಾಂಕ್) ನಿರ್ವಹಿಸುವ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯ ರೀತಿಯಲ್ಲಿ ಸರ್ಕಾರವು ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿಯನ್ನು ಸಹ ರಚಿಸಲಿದೆ ಎಂದು ಅವರು ಘೋಷಿಸಿದ್ದಾರೆ.

ಇವುಗಳನ್ನೂ ಓದಿ

ಇಲ್ಲಿದೆ ಕೇಂದ್ರ ಬಜೆಟ್ನ ಸಂಪೂರ್ಣ ಮಾಹಿತಿ Live

Union Budget 2023 highlights: ಕೇಂದ್ರ ಬಜೆಟ್ ಮುಖ್ಯಾಂಶಗಳು

Union Budget 2023: ಮಹಿಳೆಯರಿಗೆ ಹೊಸ ಉಳಿತಾಯ ಯೋಜನೆ ಘೋಷಣೆ

ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತು ಬಜೆಟ್ ವೀಕ್ಷಿಸಿದ ನಿರ್ಮಲಾ ಪುತ್ರಿ ವಾಂಗ್ಮಾಯಿ

Budget 2023| ಏಕಲವ್ಯ ವಸತಿ ಶಾಲೆಗಳಿಗೆ 38,800 ಶಿಕ್ಷಕರು, ಸಿಬ್ಬಂದಿ ನೇಮಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.