ನವದೆಹಲಿ: 18ನೇ ಲೋಕಸಭೆಯ ಮೊದಲ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕ್ಯಾನ್ಸರ್ ಸಂಬಂಧಿತ ಮೂರು ಔಷಧಿಗಳಿಗೆ ಕಸ್ಟಮ್ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡುವ ಕುರಿತು ಪ್ರಸ್ತಾಪಿಸಿದ್ದಾರೆ.

‘ಕ್ಯಾನ್ಸರ್ ರೋಗಿಗಳಿಗೆ ನೆರವು ಒದಗಿಸುವ ನಿಟ್ಟಿನಲ್ಲಿ, ಮೂರು ಔಷಧಿಗಳಿಗೆ ಕಸ್ಟಮ್ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಲು ಪ್ರಸ್ತಾಪಿಸುತ್ತೇನೆ’ ಎಂದು ಲೋಕಸಭೆಯಲ್ಲಿ ಬಜೆಟ್ ಮಂಡನೆ ವೇಳೆ ಸೀತಾರಾಮನ್ ತಿಳಿಸಿದ್ದಾರೆ.

ಟ್ರಾಸ್ಟುಜುಮಾಬ್ ಡೆರುಕ್ಸ್ಟೆಕನ್, ಒಸಿಮೆರ್ಟಿನಿಬ್ ಮತ್ತು ದುರ್ವಾಲುಮಾಬ್ ಔಷಧಿಗಳ ಮೇಲಿನ ಶೇಕಡ 10ರಷ್ಟು ಕಸ್ಟಮ್ ಸುಂಕವನ್ನು ಸಂಪೂರ್ಣ ತೆಗೆದುಹಾಕಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಎಕ್ಸ್-ರೇ ಟ್ಯೂಬ್, ಎಕ್ಸ್-ರೇ ಮಷಿನ್ಗಳ ಫ್ಲ್ಯಾಟ್ ಪ್ಯಾನೆಲ್ ಡಿಟೆಕ್ಟರ್ಗಳ ಬೇಸಿಕ್ ಕಸ್ಟಮ್ಸ್ ಟ್ಯಾಕ್ಸ್ (ಬಿಸಿಡಿ) ಹಂತ ಹಂತವಾಗಿ ಬದಲಾಯಿಸುವ ಕುರಿತಾಗಿಯೂ ಅವರು ಪ್ರಸ್ತಾಪಿಸಿದ್ದಾರೆ.

ದೇಶಿಯ ಉತ್ಪಾದನೆಯನ್ನು ಬೆಂಬಲಿಸಲು, ಸ್ಥಳೀಯ ಮೌಲ್ಯವರ್ಧನೆಯನ್ನು ಹೆಚ್ಚಿಸಲು, ರಫ್ತು ಉತ್ತೇಜನ ಮತ್ತು ತೆರಿಗೆಯನ್ನು ಸರಳಗೊಳಿಸುವ ಉದ್ದೇಶದಿಂದ ಕಸ್ಟಮ್ ಸುಂಕ ವಿನಾಯಿತಿಯನ್ನು ನೀಡಲಾಗಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
.Union Budget 2024 | ಸರ್ಕಾರಿ ನೌಕರರ ತರಬೇತಿಗಾಗಿ ₹309.74 ಕೋಟಿ ಘೋಷಣೆ.ದೇಶಕ್ಕಾಗಿ ಅಲ್ಲ; ಬಿಹಾರ, ಆಂಧ್ರಕ್ಕಾಗಿ ಬಜೆಟ್ ಮಂಡನೆ: NCPಯ ಶರದ್ ಪವಾರ್ ಬಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.