ಮುಂಬೈ: ಉಪಭೋಗದಲ್ಲಿನ ಕುಸಿತವೇ ಮಂದಗತಿಯ ಆರ್ಥಿಕತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಜಾಗತಿಕ ದಲ್ಲಾಳಿ ಸಂಸ್ಥೆ ಗೋಲ್ಡ್ಮನ್ ಸ್ಯಾಚ್ಸ್ ಅಭಿಪ್ರಾಯಪಟ್ಟಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್ಬಿಎಫ್ಸಿ) ಬಿಕ್ಕಟ್ಟಿನಿಂದಾಗಿ ಉಪಭೋಗದಲ್ಲಿ ಕುಸಿತ ಕಂಡುಬಂದಿದೆ ಎಂದು ಹೇಳುವುದು ಸರಿಯಲ್ಲ. ಏಕೆಂದರೆ ಎನ್ಬಿಎಫ್ಸಿ ಬಿಕ್ಕಟ್ಟು ಶುರುವಾಗಿದ್ದು2018ರ ಸೆಪ್ಟೆಂಬರ್ನಲ್ಲಿ. ಆದರೆ2018ರ ಜನವರಿಯಿಂದಲೇ ಉಪಭೋಗ ಇಳಿಕೆ ಕಾಣಲಾರಂಭಿತ್ತು’ ಎಂದುಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆ ಪ್ರಾಚಿ ಮಿಶ್ರಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಮಂದಗತಿಯ ಬೆಳವಣಿಗೆ ಆರಂಭವಾಗಿ 20 ತಿಂಗಳೇ ಕಳೆದಿದೆ. ಹೀಗಿದ್ದರೂ ಇದು ತಾತ್ಕಾಲಿಕವಾಗಿದ್ದು, ನೋಟು ರದ್ದತಿ ಅಥವಾ 2008ರ ಆರ್ಥಿಕ ಹಿಂಜರಿತದಂತಹ ಸ್ಥಿತಿಗಿಂತಲೂ ಭಿನ್ನವಾಗಿದೆ ಎಂದು ಅವರು ಹೇಳಿದ್ದಾರೆ.

ಚೇತರಿಸಿಕೊಳ್ಳಲಿದೆ: ‘ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಒಟ್ಟಾರೆ ಐದು ಬಾರಿ ರೆಪೊ ದರದಲ್ಲಿ ಕಡಿತ ಮಾಡಿದೆ. ಇದರಿಂದ ನಗದು ಹರಿವು ಹೆಚ್ಚಾಗಲಿದೆ. ಜತೆಗೆ ಕಾರ್ಪೊರೇಟ್ ತೆರಿಗೆ ದರ ಕಡಿತದಂತಹ ನಿರ್ಧಾರಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕತೆಯು ಚೇತರಿಸಿಕೊಳ್ಳುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.