ನವದೆಹಲಿ: ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ ಮತ್ತು ಸೆಕ್ಯುರಿಟೀಸ್ ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ) ಲಂಚದ ಆರೋಪ ಮಾಡಿರುವ ಬೆನ್ನಲ್ಲೇ, ಗುರುವಾರ ನಡೆದ ದೇಶದ ಷೇರುಪೇಟೆ ವಹಿವಾಟಿನಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರಿನ ಮೌಲ್ಯ ಶೇ 20ರಷ್ಟು ಕುಸಿದಿದೆ.

ಒಂದು ದಿನ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್) ₹2.19 ಲಕ್ಷ ಕೋಟಿ ಕರಗಿದೆ.

ಅದಾನಿ ಎಂಟರ್ಪ್ರೈಸಸ್ ಶೇ 22.61, ಅದಾನಿ ಎನರ್ಜಿ ಸೆಲ್ಯೂಷನ್ಸ್ ಶೇ 20, ಅದಾನಿ ಗ್ರೀನ್ ಎನರ್ಜಿ ಶೇ 18.80, ಅದಾನಿ ಪೋರ್ಟ್ಸ್ ಶೇ 13.53, ಅಂಬುಜಾ ಸಿಮೆಂಟ್ಸ್ ಶೇ 11.98, ಅದಾನಿ ಟೋಟಲ್ ಗ್ಯಾಸ್ ಷೇರಿನ ಮೌಲ್ಯದಲ್ಲಿ ಶೇ 10.40ರಷ್ಟು ಇಳಿಕೆಯಾಗಿದೆ.

ಅದಾನಿ ವಿಲ್ಮರ್ ಶೇ 9.98, ಅದಾನಿ ಪವರ್ ಶೇ 9.15, ಎಸಿಸಿ ಶೇ 7.29 ಹಾಗೂ ಎನ್ಡಿಟಿವಿ ಷೇರಿನ ಮೌಲ್ಯದಲ್ಲಿ ಶೇ 0.06ರಷ್ಟು ಇಳಿಕೆಯಾಗಿದೆ.

ಕಳೆದ ವರ್ಷದ ಜನವರಿಯಲ್ಲಿ ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್ಬರ್ಗ್ ರಿಚರ್ಸ್ ಅದಾನಿ ಸಮೂಹದ ವಿರುದ್ಧ ವರದಿ ಬಿಡುಗಡೆಗೊಂಡಿದ್ದ ವೇಳೆ ಆಗಿದ್ದ ನಷ್ಟಕ್ಕಿಂತ ಎರಡು ಪಟ್ಟು ಹೆಚ್ಚು ನಷ್ಟವಾಗಿದೆ ಎಂದು ಹೇಳಲಾಗಿದೆ.

ಬಾಂಡ್ ಮಾರಾಟ ರದ್ದು: ಲಂಚದ ಆರೋಪ ಕೇಳಿಬಂದಿರುವುದರಿಂದ ಅದಾನಿ ಗ್ರೀನ್ ಎನರ್ಜಿ ಕಂಪನಿಯು 600 ಮಿಲಿಯನ್ ಅಮೆರಿಕನ್ ಡಾಲರ್ (₹4,442 ಕೋಟಿ) ಮೌಲ್ಯದ ಹಸಿರು ಬಾಂಡ್ಗಳ ಮಾರಾಟ ಪ್ರಕ್ರಿಯೆಯನ್ನು ರದ್ದುಪಡಿಸಿದೆ.

ಅಮೆರಿಕದ ಹೂಡಿಕೆ ಮಾರುಕಟ್ಟೆಯಲ್ಲಿ ಕಂಪನಿಯು 20 ವರ್ಷಗಳ ಅವಧಿಯ ಈ ಬಾಂಡ್ಗಳನ್ನು ಮಾರಾಟ ಮಾಡಿತ್ತು. ಬಾಂಡ್ಗಳಿಗೆ ಒಟ್ಟಾರೆ 3 ಪಟ್ಟು ಬೇಡಿಕೆ ಕಂಡುಬಂದಿತ್ತು.

‘ಕಂಪನಿಯ ನಿರ್ದೇಶಕರ ವಿರುದ್ಧ ಲಂಚದ ಆರೋಪ ಕೇಳಿಬಂದಿದೆ. ಹಾಗಾಗಿ, ಬಾಂಡ್ಗಳ ಮಾರಾಟ ಸ್ಥಗಿತಗೊಳಿಸಲು ಅದಾನಿ ಸಮೂಹದ ಅಂಗಸಂಸ್ಥೆಗಳು ತೀರ್ಮಾನಿಸಿವೆ’ ಎಂದು ಗ್ರೀನ್ ಎನರ್ಜಿ ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಕಳೆದ ವರ್ಷ ಅದಾನಿ ಎಂಟರ್ಪ್ರೈಸಸ್ ಕಂಪನಿಯು ಷೇರು ಮಾರಾಟ ಪ್ರಕ್ರಿಯೆ (ಎಫ್ಪಿಒ) ಮೂಲಕ ₹20 ಸಾವಿರ ಕೋಟಿ ಬಂಡವಾಳ ಸಂಗ್ರಹಕ್ಕೆ ಮುಂದಾಗಿತ್ತು. ಇದೇ ವೇಳೆ ವಾಸ್ತವಿಕ ಬೆಲೆಗಿಂತ ಶೇ 80ರಷ್ಟು ಹೆಚ್ಚು ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂದು ಹಿಂಡನ್ಬರ್ಗ್ ಆರೋಪಿಸಿತ್ತು. ಹಾಗಾಗಿ, ಎಫ್ಪಿಒ ಪ್ರಕ್ರಿಯೆಯನ್ನು ರದ್ದುಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.