ನವದೆಹಲಿ: ಅಮೆರಿಕ ಮೂಲಕ ಶಾರ್ಟ್ ಸೆಲ್ಲಿಂಗ್ ಕಂಪನಿ ಹಿಂಡನ್‌ಬರ್ಗ್ ವರದಿಯಿಂದ ಉಂಟಾಗಿರುವ ಹಾನಿ ಬಳಿಕ, ತನ್ನ ಷೇರುಗಳ ಬಗ್ಗೆ ಹೂಡಿಕೆದಾರರಲ್ಲಿ ವಿಶ್ವಾಸ ಗಳಿಸುವ ಸಲುವಾಗಿ ಅದಾನಿ ಸಮೂಹವು ಸುಮಾರು 2.15 ಬಿಲಿಯನ್ ಡಾಲರ್ ಸಾಲವನ್ನು ಮರುಪಾವಾತಿ ಮಾಡಿರುವುದಾಗಿ ಭಾನುವಾರ ಹೇಳಿಕೊಂಡಿದೆ.

ಮಾರ್ಚ್ 31ರ ಒಳಗಾಗಿ ಸಂಪೂರ್ಣ ಸಾಲ ಮಾರುಪಾವತಿ ಯೋಜನೆಯನ್ನು ಅದಾನಿ ಸಮೂಹವು ಹಾಕಿಕೊಂಡಿದ್ದು, ಇದರ ಭಾಗವಾಗಿ ಇಷ್ಟು ಮೊತ್ತದ ಸಾಲವನ್ನು ಮರುಪಾವತಿ ಮಾಡಿದೆ.

ಈ ಬಗ್ಗೆ ಭಾನುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅದಾನಿ ಸಮೂಹವು, ಷೇರುಗಳನ್ನು ಅಡವಿಟ್ಟು ಪಡೆಯಲಾಗಿದ್ದ 2.15 ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡಿರುವುದಾಗಿ ಹೇಳಿದೆ. ಅಲ್ಲದೇ ಅಂಬುಜಾ ಸಿಮೆಂಟ್ ಸ್ವಾಧೀನಕ್ಕೆ ಪಡೆಯಲಾಗಿದ್ದ 500 ಮಿಲಿಯನ್ ಡಾಲರ್ ಸಾಲವನ್ನೂ ಪಾವತಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲ ದಿನಗಳ ಹಿಂದಷ್ಟೇ ಷೇರು ಅಡವಿಟ್ಟು ಪಡೆಯಲಾಗಿದ್ದ ಸುಮಾರು ₹ 7,374 ಕೋಟಿ ಸಾಲವನ್ನು ಪಾವತಿ ಮಾಡಿದ್ದಾಗಿ ಅದಾನಿ ಸಮೂಹ ಹೇಳಿಕೊಂಡಿತ್ತು.

ಸದ್ಯ ಪಾವತಿ ಮಾಡಿರುವ ಸಾಲದ ಹಣದ ಮೂಲ ಯಾವುದು ಎಂದು ಅದಾನಿ ಸಮೂಹವು ಸ್ಪಷ್ಟಪಡಿಸಿಲ್ಲ.

2.65 ಬಿಲಿಯನ್ ಡಾಲರ್ ಸಾಲ ಮರುಪಾವತಿ ಪ್ರಕ್ರಿಯೆಯು ಆರು ತಿಂಗಳಿನಲ್ಲಿ ಪೂರ್ಣಗೊಂಡಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.