ನವದೆಹಲಿ: ಡಿಬಿ ಪವರ್ ಕಂಪನಿಯ ಉಷ್ಣವಿದ್ಯುತ್ ಘಟಕಗಳನ್ನು ಖರೀದಿಸುವ ಅದಾನಿ ಪವರ್ ಲಿಮಿಟೆಡ್‌ನ ಒಪ್ಪಂದದ ಅವಧಿ ಮುಗಿದಿದೆ. ಆದರೆ ಡಿಬಿ ಪವರ್‌ನ ಘಟಕಗಳನ್ನು ಅದಾನಿ ಪವರ್ ಖರೀದಿಸಿಲ್ಲ.

ಈ ವಿಚಾರವನ್ನು ಅದಾನಿ ಪವರ್ ಲಿಮಿಟೆಡ್, ಷೇರುಪೇಟೆಗೆ ತಿಳಿಸಿದೆ. ಡಿಬಿ ಪವರ್ ಲಿಮಿಟೆಡ್‌ಅನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಒಪ್ಪಿರುವುದಾಗಿ ಅದಾನಿ ಪವರ್ 2022ರ ಆಗಸ್ಟ್‌ನಲ್ಲಿ ಷೇರುಪೇಟೆಗೆ ತಿಳಿಸಿತ್ತು. ಡಿಬಿ ಪವರ್ ಕಂಪನಿಯು ಚತ್ತೀಸಗಢದಲ್ಲಿ ಉಷ್ಣವಿದ್ಯುತ್ ಸ್ಥಾವರವನ್ನು ಹೊಂದಿದೆ.

ಈ ವಿಚಾರವಾಗಿ ಅದಾನಿ ಪವರ್ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿಲ್ಲ. ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು, ಷೇರು ಬೆಲೆಯ ಮೇಲೆ ಕೃತಕವಾಗಿ ಪ್ರಭಾವ ಬೀರಿದ ಹಾಗೂ ಲೆಕ್ಕಪತ್ರಗಳ ಅಕ್ರಮದಲ್ಲಿ ತೊಡಗಿದ ಆರೋಪ ಹೊರಿಸಿದ ನಂತರದಲ್ಲಿ ಈ ಬೆಳವಣಿಗೆ ನಡೆದಿದೆ.

ಆರಂಭದ ಒಪ್ಪಂದದ ಪ್ರಕಾರ ಸ್ವಾಧೀನವು 2022ರ ಅಕ್ಟೋಬರ್ 31ಕ್ಕೆ ಮೊದಲು ಪೂರ್ಣಗೊಳ್ಳಬೇಕಿತ್ತು. ನಂತರ ಈ ಗಡುವನ್ನು ನಾಲ್ಕು ಬಾರಿ ವಿಸ್ತರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.