ನವದೆಹಲಿ (ಪಿಟಿಐ): ಸಿಎನ್‌ಜಿ ಹಾಗೂ ಕೊಳವೆ ಮೂಲಕ ಮನೆಗಳಿಗೆ ತಲುಪಿಸುವ ಅಡುಗೆ ಅನಿಲದ (ಪಿಎನ್‌ಜಿ) ದರ ದೆಹಲಿಯಲ್ಲಿ ಕೆ.ಜಿಗೆ ₹6ರವರೆಗೆ ಇಳಿಕೆ ಆಗಿದೆ. ಎರಡು ವರ್ಷಗಳಲ್ಲಿ ಮೊದಲ ಇಳಿಕೆ ಇದಾಗಿದೆ.

ದರ ಪರಿಷ್ಕರಣೆಯಿಂದ ದೆಹಲಿಯಲ್ಲಿ ಕೆ.ಜಿ ಸಿಎನ್‌ಜಿ ದರ ₹79.56ರಿಂದ ₹74.59ಕ್ಕೆ ಇಳಿಕೆ ಆಗಿದೆ. ಪಿಎನ್‌ಜಿ ದರ ₹53.59 ರಿಂದ ₹48.59ಕ್ಕೆ (₹5) ಇಳಿಕೆ ಕಂಡಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ಟ್ವೀಟ್ ಮಾಡಿದೆ.

ಅದಾನಿ ಟೋಟಲ್ ಗ್ಯಾಸ್ ಕಂಪನಿಯು ಶನಿವಾರದಿಂದ ಜಾರಿಗೆ ಬರುವಂತೆ ಸಿಎನ್‌ಜಿ ದರ ಕೆ.ಜಿಗೆ ₹8.13ರಷ್ಟು ಇಳಿಕೆ ಮಾಡಿದೆ. ಇದರಿಂದ ವಡೋದರದಾದಲ್ಲಿ ನೀಡಿಕೆ ದರ ಕೆ.ಜಿಗೆ ₹72.03 ಮತ್ತು ಅಹಮದಾಬಾದ್‌ನಲ್ಲಿ ₹ 73.29ಕ್ಕೆ ಇಳಿಕೆ ಆಗಿದೆ. ಪಿಎನ್‌ಜಿ ದರ (ತೆರಿಗೆಗಳನ್ನು ಹೊರತುಪಡಿಸಿ) ಪ್ರತಿ ಕ್ಯುಬಿಕ್ ಮೀಟರ್‌ಗೆ ₹ 46.84ಕ್ಕೆ ಇಳಿಕೆ ಕಂಡಿದೆ.

ಕೇಂದ್ರ ಸರ್ಕಾರವು ನೈಸರ್ಗಿಕ ಅನಿಲದ ಬೆಲೆಯನ್ನು ನಿರ್ಧರಿಸುವ ಸೂತ್ರವನ್ನು ಪರಿಷ್ಕರಿಸಿರುವುದರಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.