ನವದೆಹಲಿ: ಅದಾನಿ ಸಮೂಹದ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ 2024–25ರ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ₹177 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹148 ಕೋಟಿ ಲಾಭ ಗಳಿಸಲಾಗಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 20ರಷ್ಟು ಏರಿಕೆಯಾಗಿದೆ ಎಂದು ಕಂಪನಿಯು ಷೇರುಪೇಟೆಗೆ ಸೋಮವಾರ ತಿಳಿಸಿದೆ.

ವರಮಾನದಲ್ಲಿ ಶೇ 9ರಷ್ಟು ಹೆಚ್ಚಳವಾಗಿದ್ದು, ₹1,237 ಕೋಟಿ ಆಗಿದೆ. ತೆರಿಗೆ, ಬಡ್ಡಿ, ಸಾಲ ತೀರುವಳಿ (ಇಬಿಐಟಿಡಿಎ) ₹308 ಕೋಟಿಯಷ್ಟಾಗಿದ್ದು, ಶೇ 21ರಷ್ಟು ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.

ಅದಾನಿ ಸಮೂಹದ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಮತ್ತು ಫ್ರಾನ್ಸ್ನ ಟೋಟಲ್ ಎನರ್ಜೀಸ್ ಜಂಟಿ ಉದ್ಯಮವಾಗಿದೆ.

ಅದಾನಿ ವಿಲ್ಮರ್ ಲಾಭ ಏರಿಕೆ:

ಅದಾನಿ ಸಮೂಹದ ಅದಾನಿ ವಿಲ್ಮರ್ ಜೂನ್ ತ್ರೈಮಾಸಿಕದಲ್ಲಿ ₹313 ಕೋಟಿ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹78 ಕೋಟಿ ನಷ್ಟ ದಾಖಲಿಸಿತ್ತು. ಅಡುಗೆ ಎಣ್ಣೆ ಮತ್ತು ಇತರೆ ಎಫ್ಎಂಸಿಜಿ ಉತ್ಪನ್ನಗಳ ಮಾರಾಟದಿಂದ ಲಾಭದ ಪ್ರಮಾಣ ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.

ಒಟ್ಟು ವರಮಾನವು ಹಿಂದಿನ ಜೂನ್ ತ್ರೈಮಾಸಿಕದಲ್ಲಿ ₹12,994 ಕೋಟಿ ಆಗಿತ್ತು. ಈ ತ್ರೈಮಾಸಿಕದಲ್ಲಿ ₹14,229 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.