ನವದೆಹಲಿ: ಚೀನಾದಿಂದ ಒಂದೊಂದೇ ಉತ್ಪಾದನಾ ಘಟಕಗಳನ್ನು ಸ್ಥಳಾಂತರಿಸುತ್ತಿರುವ ಆ್ಯಪಲ್, ಐಪ್ಯಾಡ್ ಘಟಕವನ್ನು ಭಾರತಕ್ಕೆ ವರ್ಗಾಯಿಸಲು ಮುಂದಾಗಿದೆ.

ಚೀನಾದಲ್ಲಿನ ಕೋವಿಡ್ ಸಂಕಷ್ಟ, ಲಾಕ್ಡೌನ್ ನಿರ್ಬಂಧಗಳು ಹಾಗೂ ಫ್ಯಾಕ್ಟರಿಯಲ್ಲಿ ಕಾರ್ಮಿಕರ ಗಲಾಟೆಯಂತಹ ಪ್ರಕರಣಗಳಿಂದ ಆ್ಯಪಲ್ ತೊಂದರೆಗೆ ಸಿಲುಕಿದೆ.

ಉತ್ಪಾದನೆ ಕುಸಿತ ಮತ್ತು ಪೂರೈಕೆ ಸರಪಣಿಗೆ ಸಮಸ್ಯೆ ಎದುರಾಗಿದ್ದರಿಂದ, ಜಾಗತಿಕ ಮಾರುಕಟ್ಟೆಯಲ್ಲಿ ಆ್ಯಪಲ್ ಐಫೋನ್ ಮತ್ತು ಇತರ ಉತ್ಪನ್ನಗಳ ಮಾರಾಟಕ್ಕೆ ತೊಂದರೆಯಾಗಿದೆ.

ಎಲ್ಲ ಉತ್ಪನ್ನ ತಯಾರಿಕೆಗೆ ಚೀನಾ ಮೇಲಿನ ಅವಲಂಬನೆ ಕಡಿತಗೊಳಿಸುವ ಉದ್ದೇಶದಿಂದ, ಆ್ಯಪಲ್ ಹಂತಹಂತವಾಗಿ ಚೀನಾದಿಂದ ಐಫೋನ್, ಐಪ್ಯಾಡ್ ಘಟಕವನ್ನು ಸ್ಥಳಾಂತರಿಸಲು ಮುಂದಾಗಿದೆ.

ಕೋಲಾರದ ಆ್ಯಪಲ್ ಐಫೋನ್ ಫ್ಯಾಕ್ಟರಿ ಖರೀದಿಸಲು ಮುಂದಾದ ಟಾಟಾ

ಹೀಗಾಗಿ ಐಪ್ಯಾಡ್ ಘಟಕವನ್ನು ಭಾರತಕ್ಕೆ ಸ್ಥಳಾಂತರಿಸುವ ಕುರಿತು, ಸರ್ಕಾರದ ವಿವಿಧ ಇಲಾಖೆ ಮತ್ತು ಅಧಿಕಾರಿಗಳ ಜತೆ ಮಾತುಕತೆಗೆ ಆ್ಯಪಲ್ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಚೀನಾ ಮೂಲದ ಹುವೈ, ಝೆಡ್ಟಿಇಗೆ ಅಮೆರಿಕದಲ್ಲಿ ನಿಷೇಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.