ನವದೆಹಲಿ: ಕೋವಿಡ್–19 ಸಾಂಕ್ರಾಮಿಕದಿಂದಾಗಿ ವೈಯಕ್ತಿಕ ಬಳಕೆಯ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಫೆಬ್ರುವರಿಯಲ್ಲಿ ವಾಹನ ತಯಾರಿಸುವ ಪ್ರಮುಖ ಕಂಪನಿಗಳು ಉತ್ತಮ ಮಾರಾಟ ಪ್ರಗತಿ ಸಾಧಿಸಿವೆ.

ಮಾರುತಿ ಸುಜುಕಿ ಇಂಡಿಯಾ ಕಂಪನಿಯ ದೇಶಿ ಮಾರಾಟವು 2020ರ ಫೆಬ್ರುವರಿಗೆ ಹೋಲಿಸಿದರೆ ಶೇ 11.8ರಷ್ಟು ಹೆಚ್ಚಾಗಿದ್ದು, 1.52 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ.

ಕಾಂಪ್ಯಾಕ್ಟ್ ಮತ್ತು ಯುಟಿಲಿಟಿ ವಾಹನಗಳ ಮಾರಾಟದಲ್ಲಿನ ಹೆಚ್ಚಳದಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ತಿಳಿಸಿದೆ.

ಹುಂಡೈ ಮೋಟರ್ ಇಂಡಿಯಾ ಕಂಪನಿಯ ಮಾರಾಟದಲ್ಲಿ ಶೇ 29ರಷ್ಟು ಹೆಚ್ಚಾಗಿದ್ದು 51,600 ವಾಹನಗಳನ್ನು ಮಾರಾಟ ಮಾಡಿದೆ.

ಟಾಟಾ ಮೋಟರ್ಸ್ನ ಪ್ರಯಾಣಿಕ ವಾಹನ ಮಾರಾಟವು ಎರಡುಪಟ್ಟು ಹೆಚ್ಚಾಗಿದ್ದು 27,225ಕ್ಕೆ ತಲುಪಿದೆ. ಅದೇ ರೀತಿ ಮಹೀಂದ್ರಾ ಕಂಪನಿಯ ಮಾರಾಟ ಶೇ 41ರಷ್ಟು ಏರಿಕೆಯಾಗಿದೆ.

ಟಿಕೆಎಂನ ದೇಶಿ ಮಾರಾಟ ಶೇ 36ರಷ್ಟು, ಹೋಂಡಾ ಕಾರ್ಸ್ನ ಸಗಟು ಮಾರಾಟವು ಶೇ 28.3ರಷ್ಟು ಹೆಚ್ಚಾಗಿದೆ. ನಿಸಾನ್ ಮೋಟರ್ ಇಂಡಿಯಾ 4,244 ವಾಹನಗಳನ್ನು ಮಾರಾಟ ಮಾಡಿದೆ.

ದ್ವಿಚಕ್ರ ವಾಹನ ವಿಭಾಗದಲ್ಲಿ ಟಿವಿಎಸ್ ಮೋಟರ್ ಕಂಪನಿಯ ಮಾರಾಟ ಶೇ 15ರಷ್ಟು ಏರಿಕೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.