ಬೆಂಗಳೂರು: ಗ್ರಾಹಕರು ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳಲ್ಲಿ ಎಷ್ಟು ಮೊತ್ತ ಇದೆ ಹಾಗೂ ಯಾವುದಕ್ಕೆಲ್ಲಾ ಖರ್ಚು ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಇನ್ನುಮುಂದೆ ಎಕ್ಸಿಸ್ ಬ್ಯಾಂಕ್‌ನ ಮೊಬೈಲ್ ಆ್ಯಪ್ ಮೂಲಕ ತಿಳಿದುಕೊಳ್ಳಬಹುದು.

ಖಾಸಗಿ ವಲಯದ ಎಕ್ಸಿಸ್ ಬ್ಯಾಂಕ್ ತನ್ನ ಮೊಬೈಲ್ ಆ್ಯಪ್‌ನಲ್ಲಿ ‘ಒನ್–ವೀವ್’ ಎನ್ನುವ ಹೊಸ ವೈಶಿಷ್ಟ್ಯವನ್ನು ಆರಂಭಿಸಿದೆ. ಇದರ ಮೂಲಕ ಗ್ರಾಹಕರು ಬೇರೆ ಬ್ಯಾಂಕ್‌ಗಳಲ್ಲಿ ತಾವು ಹೊಂದಿರುವ ಖಾತೆಗಳನ್ನು ಸುಲಭವಾಗಿ ಲಿಂಕ್ ಮಾಡಿ, ಆ ಖಾತೆಗಳ ಮಾಹಿತಿ ತಿಳಿಯಬಹುದು. ಈ ಸೌಲಭ್ಯವು ಸದ್ಯಕ್ಕೆ ಎಕ್ಸಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರಿಗೆ ಮಾತ್ರವೇ ಸೀಮಿತವಾಗಿದ್ದು, ಎಕ್ಸಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದದೇ ಇರುವವರಿಗೆ ಕೂಡ ಶೀಘ್ರದಲ್ಲಿಯೇ ಲಭ್ಯವಾಗಲಿದೆ ಎಂದು ಬ್ಯಾಂಕ್‌ನ ಡಿಜಿಟಲ್ ವಹಿವಾಟಿನ ಅಧ್ಯಕ್ಷ ಸಮೀರ್ ಶೆಟ್ಟಿ ಅವರು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಕೌಂಟ್ ಅಗ್ರಿಗೇಟರ್ ವ್ಯವಸ್ಥೆಯ ಮೂಲಕ ಇದು ಸಾಧ್ಯವಾಗಿದೆ. ಈ ವ್ಯವಸ್ಥೆ ಬಳಸಿ ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್, ವಾಹನ ಸಾಲ, ಸಣ್ಣ ಉದ್ದಿಮೆಗೆ ಸಾಲವನ್ನು ಬ್ಯಾಂಕ್ ನೀಡಲಿದೆ. ಬ್ಯಾಂಕ್‌ನ ಹಾಲಿ ಗ್ರಾಹಕರಿಗೆ ಮತ್ತು ಹೊಸ ಗ್ರಾಹಕರಿಗೆ ಡಿಜಿಟಲ್ ಮಾರ್ಗದ ಮೂಲಕವೇ ತಕ್ಷಣ ಸಾಲ ಮಂಜೂರು ಮಾಡಲಾಗುವುದು ಎಂದು ಸಮೀರ್ ತಿಳಿಸಿದರು.

ಬೇಡವೆಂದಾಗ ಖಾತೆಯನ್ನು ಸುಲಭವಾಗಿ ಡೀ–ಲಿಂಕ್ ಮಾಡಬಹುದು. ಲಿಂಕ್ ಆಗಿರುವ ಯಾವುದೇ ಖಾತೆಯಲ್ಲಿನ ವರ್ಗಾವಣೆಯ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡು ಇ–ಮೇಲ್ ಸಹ ಮಾಡಿಕೊಳ್ಳಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.