ನವದೆಹಲಿ: ಬೆಂಗಳೂರಿನಲ್ಲಿ ಕಚೇರಿ ಬಾಡಿಗೆ ಪ್ರಮಾಣವು ಮುಂದಿನ ವರ್ಷ ಶೇ 5 ರಿಂದ ಶೇ 7ರವರೆಗೆ ಹೆಚ್ಚಾಗುವ ನಿರೀಕ್ಷೆ ಇದೆ. ಇದು ಏಷ್ಯಾ–ಪೆಸಿಫಿಕ್ ಪ್ರದೇಶದಲ್ಲಿಯೇ ಹೆಚ್ಚಿನದ್ದಾಗಿರಲಿದೆ ಎಂದು ನೈಟ್ ಫ್ರ್ಯಾಂಕ್ ಇಂಡಿಯಾ ಕಂಪನಿ ಹೇಳಿದೆ.

ಭಾರತದ ಆರ್ಥಿಕ ಮುನ್ನೋಟವು ಉತ್ತಮವಾಗಿರುವುದು, ವೆಚ್ಚ ತಗ್ಗಿಸುವು ಭಾಗವಾಗಿ ಹೊರಗುತ್ತಿಗೆ ನೀಡುವುದು ಹೆಚ್ಚಾಗಿರುವುದು ಹಾಗೂ ರೂಪಾಯಿ ಮೌಲ್ಯ ಇಳಿಕೆಯ ಕಾರಣಗಳಿಂದಾಗಿ ಕಚೇರಿ ಬಾಡಿಗೆ ಪ್ರಮಾಣವು ಹೆಚ್ಚಾಗಲಿದೆ ಎಂದು ಅದು ಹೇಳಿದೆ.

ಆಸ್ತಿ ಸಲಹಾ ಕಂಪನಿ ಆಗಿರುವ ನೈಟ್ ಫ್ರ್ಯಾಂಕ್, ‘2023ರ ಏಷ್ಯಾ–ಪೆಸಿಫಿಕ್ ಮುನ್ನೋಟ’ದ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಂತೆ, ಕಾರ್ಪೊರೇಟ್ ಕಂಪನಿಗಳು ವೆಚ್ಚ ತಗ್ಗಿಸಲು ಮತ್ತು ಉಳಿತಾಯದತ್ತ ಗಮನ ಹರಿಸಲು ಮುಂದಾಗಿವೆ. ಹೀಗಾಗಿ ಏಷ್ಯಾ–ಪೆಸಿಫಿಕ್ ಪ್ರದೇಶದಲ್ಲಿ 2023ರಲ್ಲಿ ಕಚೇರಿ ಬಾಡಿಗೆಯು ನಿಧಾನಗತಿಯಲ್ಲಿ ಏರಿಕೆ ಕಾಣಲಿದೆ.

ಆದರೆ, ಭಾರತದಲ್ಲಿ ಕಚೇರಿ ಮಾರುಕಟ್ಟೆಗಳು 2022ರಲ್ಲಿ ಕಂಡಂತಹ ಉತ್ತಮ ಬೆಳವಣಿಗೆಯನ್ನೇ 2023ರಲ್ಲಿಯೂ ಇರಲಿದೆ. ಕಚೇರಿ ಬಾಡಿಗೆ ಪ್ರಮಾಣವುನವದೆಹಲಿಯಲ್ಲಿ ಶೇ 4 ರಿಂದ ಶೇ 6ರವರೆಗೆ ಮತ್ತು ಮುಂಬೈನಲ್ಲಿ ಶೇ 3-5ರವರೆಗೆ ಏರಿಕೆ ಕಾಣಲಿದೆ ಎಂದು ವರದಿಯಲ್ಲಿ ತಿಳಿಸಿದೆ

ವಸತಿ ಮಾರುಕಟ್ಟೆ:

ಬೆಂಗಳೂರಿನಲ್ಲಿ ಮನೆ ಬಾಡಿಗೆಯು 2023ರಲ್ಲಿ ಶೇ 5ರವರೆಗೆ ಏರಿಕೆ ಆಗಲಿದೆ. ನವೋದ್ಯಮಗಳು ಮತ್ತು ಯುನಿಕಾರ್ನ್‌ಗಳ ಬೆಳವಣಿಗೆ ಹಾಗೂ ಆದಾಯ ಮಟ್ಟದಲ್ಲಿ ಏರಿಕೆಯಂತಹ ಅಂಶಗಳು ಬೆಂಗಳೂರನ್ನು ಎಪಿಎಸಿ ವಲಯದಲ್ಲಿಯೇ ಪ್ರಬಲ ಮಾರುಕಟ್ಟೆಯನ್ನಾಗಿ ಮಾಡಲಿದೆ ಎಂದು ವರದಿಯು ತಿಳಿಸಿದೆ. ಮನೆ ಬಾಡಿಗೆಯು ಮುಂಬೈನಲ್ಲಿ ಶೇ 4ರವರೆಗೆ ಮತ್ತು ನವದೆಹಲಿಯಲ್ಲಿ ಶೇ 2–3ರವರೆಗೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.