ಬೆಂಗಳೂರು: ಬ್ರಿಗೇಡ್ ಸಮೂಹವು ಇದೇ 15 ಮತ್ತು 16ರಂದು ತನ್ನ ವಸತಿ ಯೋಜನೆಗಳ ವರ್ಚುವಲ್ ಎಕ್ಸ್ಪೊ ಹಮ್ಮಿಕೊಂಡಿದೆ.

‘ಈ ಹಿಂದೆ ಹಲವು ಆನ್ಲೈನ್ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಆದರೆ, ಇದು ಅವಕ್ಕಿಂತಲೂ ಭಿನ್ನವಾಗಿರಲಿದೆ. ಈ ರೀತಿಯ ಪ್ರದರ್ಶನ ಆಯೋಜನೆ ಆಗುತ್ತಿರುವುದು ದೇಶದಲ್ಲಿ ಇದೇ ಮೊದಲ ಬಾರಿ. ಸಾಮಾನ್ಯವಾಗಿ ನಡೆಯುವ ಎಕ್ಸ್ಪೊಗಳಲ್ಲಿ ವಿವಿಧ ಮಳಿಗೆಗಳು ಇರುವಂತೆಯೇ ಈ ವರ್ಚುವಲ್ ಎಕ್ಸ್ಪೊದಲ್ಲಿಯೂ ಮಳಿಗೆಗಳು ಇರಲಿವೆ’ ಎಂದು ಕಂಪನಿ ತಿಳಿಸಿದೆ.

ಬೆಂಗಳೂರು, ಮೈಸೂರು ಮತ್ತು ಚೆನ್ನೈನಲ್ಲಿ ಇರುವ 30ಕ್ಕೂ ಅಧಿಕ ವಸತಿ ನಿವೇಶನಗಳು ಪ್ರದರ್ಶನಕ್ಕೆ ಇರಲಿವೆ. ಗ್ರಾಹಕಸ್ನೇಹಿ ಪಾವತಿ ಯೋಜನೆಗಳು ಇರಲಿವೆ. ಈ ಎಕ್ಸ್ಪೊದಲ್ಲಿ ಬುಕಿಂಗ್ ಮಾಡುವ ಪ್ರತಿಯೊಬ್ಬರಿಗೂ ₹ 40 ಸಾವಿರ ಮೌಲ್ಯದ ಉಡುಗೊರೆ ದೊರೆಯುವುದು ಖಾತರಿ ಎಂದು ಹೇಳಿದೆ.

‘ಭಾರತದಲ್ಲೇ ಮೊದಲ ಬಾರಿಗೆ ವರ್ಚುವಲ್ ಪ್ರಾಪರ್ಟಿ ಎಕ್ಸ್ಪೊ ಆಯೋಜಿಸುತ್ತಿದ್ದೇವೆ. ಈ ಎರಡು ದಿನಗಳಲ್ಲಿ ನಿಮ್ಮ ಕನಸಿನ ಮನೆಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ನಾವು ಆಹ್ವಾನಿಸುತ್ತಿದ್ದೇವೆ’ ಎಂದು ಬ್ರಿಗೇಡ್ ಸಮೂಹದ ಸಿಇಒ ರಾಜೇಂದ್ರ ಜೋಶಿ ಹೇಳಿದ್ದಾರೆ. ವರ್ಚುವಲ್ ಎಕ್ಸ್ಪೊ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7ರವರೆಗೆ ಗ್ರಾಹಕರಿಗೆ ಮುಕ್ತವಾಗಿರಲಿದೆ.

ಹೆಚ್ಚಿನ ಮಾಹಿತಿಗೆ: www.BrigadeGroup.com ವೆಬ್ಸೈಟ್ಗೆ ಭೇಟಿ ನೀಡಬಹುದು ಅಥವಾ 1800 102 9977 ಸಂಖ್ಯೆಗೆ ಕರೆ ಮಾಡಬಹುದು.

ಬ್ರಿಗೇಡ್ಗೆ ನಷ್ಟ
ಲಾಕ್ಡೌನ್ನಿಂದಾಗಿ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ರಿಗೇಡ್ ಎಂಟರ್ಪ್ರೈಸಸ್ ₹ 53 ಕೋಟಿಗಳಷ್ಟು ನಷ್ಟ ಅನುಭವಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 41 ಕೋಟಿ ಲಾಭ ಗಳಿಸಿತ್ತು.

ಒಟ್ಟಾರೆ ವಹಿವಾಟು ಮೊತ್ತ ₹ 214 ಕೋಟಿಗಳಷ್ಟಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 717 ಕೋಟಿಗಳಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.