ಬ್ಯಾಡಗಿ ಎಪಿಎಂಸಿ ಪ್ರಾಂಗಣದಲ್ಲಿ ಮಾರಾಟಕ್ಕೆ ಇಡಲಾಗಿರುವ ಮೆಣಸಿನಕಾಯಿಗೆ ವರ್ತಕರು ಟೆಂಡರ್ ನಮೂದಿಸುತ್ತಿರುವುದು
ಎಪಿಎಂಸಿಯಲ್ಲಿ ಇ–ಟೆಂಡರ್ ಅಳವಡಿಸಲಾಗಿದೆ. ಇದರಿಂದ ಸಂಜೆ 4ಕ್ಕೆ ಟೆಂಡರ್ ಡಿಕ್ಲೇರ್ ಮಾಡಲಾಗುತ್ತದೆ. ತೂಕದ ಪ್ರಕ್ರಿಯೆ ಬಳಿಕ ನಂತರ ರೈತರಿಗೆ ಪಟ್ಟಿ ನೀಡಿ ಹಣ ನೀಡಲಾಗುತ್ತದೆ.
–ಎಚ್.ವೈ. ಸತೀಶ, ಕಾರ್ಯದರ್ಶಿ ಎಪಿಎಂಸಿ ಬ್ಯಾಡಗಿ
ಒಂದೇ ದಿನದಲ್ಲಿ ನೂರಾರು ಕ್ವಿಂಟಲ್ ಮೆಣಸಿನಕಾಯಿ ಮಾರಾಟಕ್ಕೆ ತರುವುದರಿಂದ ಜಾಗದ ಕೊರತೆಯಾಗುತ್ತಿದೆ. ಇದನ್ನು ನೀಗಿಸಲು ಸರ್ಕಾರ ಮಾರುಕಟ್ಟೆಗೆ ಹೊಂದಿಕೊಂಡಿರುವ ಜಾಗ ನೀಡುವುದು ಅವಶ್ಯ.
–ಸುರೇಶಗೌಡ್ರ ಪಾಟೀಲ, ಅಧ್ಯಕ್ಷ ವರ್ತಕರ ಸಂಘ ಬ್ಯಾಡಗಿ
ವಿವಿಧ ತಳಿಯ ಮೆಣಸಿನಕಾಯಿ ಅಭಿವೃದ್ಧಿಪಡಿಸಿದ ಪರಿಣಾಮ ಬ್ಯಾಡಗಿ ಮೂಲ ತಳಿ ನೇಪಥ್ಯಕ್ಕೆ ಸರಿದಿದೆ. ಕುಂದಗೋಳ ಗದಗ ಅಂತೂರ ಬೆಂತೂರನಲ್ಲಿ ಬೆಳೆಯುವ ಬ್ಯಾಡಗಿ ಮೂಲ ತಳಿಯನ್ನು ಅಭಿವೃದ್ಧಿಪಡಿಸಬೇಕು.
–ಎಸ್.ಬಿ. ಖಾನಗೌಡ್ರ, ದಲ್ಲಾಳಿ
ಸಂಕಷ್ಟ ಕಾಲದಲ್ಲಿ ನಮಗೆ ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆ ಆಸರೆಯಾಗಿದೆ. ಜೀವನಕ್ಕೆ ಒಂದು ದಾರಿ ತೋರಿದೆ. ಮೆಣಸಿನಕಾಯಿ ತುಂಬು (ತೊಟ್ಟು) ತೆಗೆಯುವ ಹಾಗೂ ಸ್ವಚ್ಛಗೊಳಿಸುವ ಕೆಲಸವನ್ನು ನಿರ್ವಹಿಸಿದರೆ ಕೂಲಿ ಸಿಗುತ್ತಿದೆ.
–ಸುಜಾತಾ ಕಮಲಾಪುರ, ಕೂಲಿ ಕಾರ್ಮಿಕರು.
ನೂರಾರು ಕಿ.ಮೀ ದೋರದಿಂದ ಮೆಣಸಿನಕಾಯಿ ಮಾರಾಟಕ್ಕೆ ತರುತ್ತಿದ್ದು ಇಲ್ಲಿಯ ವರ್ತಕರ ಪಾರದರ್ಶಕ ತೂಕ ಶೀಘ್ರ ಹಣದ ವಿಲೇವಾರಿಯಿಂದ ರೈತರ ವಿಶ್ವಾಸ ಗಳಿಸಿದೆ