ನವದೆಹಲಿ: ವಂಚನೆಯನ್ನು ತಡೆಯುವ ಪ್ರಯತ್ನದಲ್ಲಿ, ಎಟಿಎಂಗಳ ಮೂಲಕ ಕಾರ್ಡ್ ರಹಿತ ನಗದು ಹಿಂಪಡೆಯುವಿಕೆಯನ್ನು ಪರಿಚಯಿಸಲು ಎಲ್ಲಾ ಬ್ಯಾಂಕ್ಗಳಿಗೆ ಅನುಮತಿ ನೀಡಲು ರಿಸರ್ವ್ ಬ್ಯಾಂಕ್ ಶುಕ್ರವಾರ ನಿರ್ಧರಿಸಿದೆ.

ಪ್ರಸ್ತುತ, ಎಟಿಎಂಗಳ ಮೂಲಕ ಕಾರ್ಡ್ ರಹಿತ ನಗದು ಹಿಂಪಡೆಯುವಿಕೆಯ ಸೌಲಭ್ಯವನ್ನು ದೇಶದ ಕೆಲವು ಬ್ಯಾಂಕ್ಗಳು ಮಾತ್ರ ನೀಡುತ್ತಿವೆ.

‘ಯುಪಿಐ ಬಳಸಿಕೊಂಡು ಎಲ್ಲಾ ಬ್ಯಾಂಕ್ಗಳು ಮತ್ತು ಎಟಿಎಂ ನೆಟ್ವರ್ಕ್ಗಳಲ್ಲಿ ಕಾರ್ಡ್-ರಹಿತ ನಗದು ಹಿಂಪಡೆಯುವ ಸೌಲಭ್ಯವನ್ನು ಲಭ್ಯವಾಗುವಂತೆ ಮಾಡಲು ಈಗ ಪ್ರಸ್ತಾಪಿಸಲಾಗಿದೆ. ಇದರಿಂದ ವಹಿವಾಟು ಸುಲಭವಾಗುವ ಜೊತೆಗೆ, ಭೌತಿಕ ಕಾರ್ಡ್ ಅಗತ್ಯ ಇರುವುದಿಲ್ಲ. ಹಾಗಾಗಿ, ಕಾರ್ಡ್ ಸ್ಕಿಮ್ಮಿಂಗ್, ಕ್ಲೋನಿಂಗ್ ಇತ್ಯಾದಿ ವಂಚನೆಗಳನ್ನು ತಡೆಯಲು ಸಹಾಯವಾಗುತ್ತದೆ’ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಬಳಕೆಯ ಮೂಲಕ ಗ್ರಾಹಕರ ದೃಢೀಕರಣವನ್ನು ಸಕ್ರಿಯಗೊಳಿಸಲು ಪ್ರಸ್ತಾಪಿಸಲಾಗಿದೆ. ಆದರೆ, ಅಂತಹ ವಹಿವಾಟುಗಳ ಇತ್ಯರ್ಥವು ಎಟಿಎಂ ನೆಟ್ವರ್ಕ್ಗಳ ಮೂಲಕ ನಡೆಯುತ್ತದೆ ಎಂದು ಅಭಿವೃದ್ಧಿ ಮತ್ತು ನಿಯಂತ್ರಣ ನೀತಿಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎನ್ಪಿಸಿಐ, ಎಟಿಎಂ ನೆಟ್ವರ್ಕ್ಗಳು ಮತ್ತು ಬ್ಯಾಂಕ್ಗಳಿಗೆ ಶೀಘ್ರದಲ್ಲೇ ಪ್ರತ್ಯೇಕ ಸೂಚನೆಗಳನ್ನು ನೀಡಲಾಗುವುದು ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.