ನವದೆಹಲಿ: ವಾರ್ಷಿಕ ಪ್ರೀಮಿಯಂ ಮೊತ್ತವು ₹5 ಲಕ್ಷಕ್ಕಿಂತ ಹೆಚ್ಚಿರುವ ಜೀವ ವಿಮಾ ಪಾಲಿಸಿಗಳಿಂದ ಸಿಗುವ ಆದಾಯಕ್ಕೆ ತೆರಿಗೆಯನ್ನು ಲೆಕ್ಕಹಾಕುವ ಬಗೆಯನ್ನು ಆದಾಯ ತೆರಿಗೆ ಇಲಾಖೆಯು ಅಂತಿಮಗೊಳಿಸಿದೆ.

ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ಜೀವ ವಿಮೆಯ ಪ್ರೀಮಿಯಂ ಮೊತ್ತವು ₹5 ಲಕ್ಷಕ್ಕಿಂತ ಹೆಚ್ಚು ಆಗಿದ್ದಲ್ಲಿ, ವಿಮಾ ಪಾಲಿಸಿಯನ್ನು 2023ರ ಏಪ್ರಿಲ್ 1ರ ನಂತರ ಪಡೆದಿದ್ದಲ್ಲಿ, ಆ ವಿಮೆಯ ಅವಧಿ ಪೂರ್ಣಗೊಂಡ ನಂತರದಲ್ಲಿ ಸಿಗುವ ಮೊತ್ತಕ್ಕೆ ತೆರಿಗೆ ಅನ್ವಯವಾಗುತ್ತದೆ.

ವಾರ್ಷಿಕ ಪ್ರೀಮಿಯಂ ಮೊತ್ತವು ₹ 5 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ, ಅಂತಹ ಜೀವ ವಿಮಾ ಪಾಲಿಸಿಗಳ ಅವಧಿ ಪೂರ್ಣಗೊಂಡ ನಂತರ ಸಿಗುವ ಮೊತ್ತಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಈ ಬದಲಾವಣೆ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು.

ಪಾಲಿಸಿ ಹೊಂದಿರುವ ವ್ಯಕ್ತಿಯ ಮರಣದ ನಂತರದಲ್ಲಿ ಸಿಗುವ ಮೊತ್ತಕ್ಕೆ ತೆರಿಗೆ ವಿನಾಯಿತಿ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.