ನವದೆಹಲಿ: ಸತತವಾಗಿ ಎರಡು ಆರ್ಥಿಕ ವರ್ಷಗಳ ಹಣಕಾಸು ವರದಿ ಸಲ್ಲಿಸದ 2.25 ಲಕ್ಷ ಸಂಸ್ಥೆಗಳ ವಿರುದ್ಧ ಹೊಸದಾಗಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

‘2015–16 ಮತ್ತು 2016–17ನೇ ಹಣಕಾಸು ವರ್ಷಗಳಲ್ಲಿ ರಿಟರ್ನ್ಸ್ ಸಲ್ಲಿಸದ 2,25,910 ಕಂಪನಿಗಳನ್ನು 2018–19ರ ಹಣಕಾಸು ವರ್ಷದ ಇದುವರೆಗಿನ ಅವಧಿಯಲ್ಲಿ ಗುರುತಿಸಲಾಗಿದೆ. ಕಂಪನಿ ಕಾಯ್ದೆಯ 248 ಸೆಕ್ಷನ್ ಅಡಿ ಈ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ’ ಎಂದು ಕಂಪನಿ ವ್ಯವಹಾರ ಸಚಿವ ಪಿ. ಪಿ. ಚೌಧರಿ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಈ ಕಂಪನಿಗಳ ನೋಂದಣಿ ರದ್ದುಪಡಿಸಲು ಕಂಪನಿ ನೋಂದಣಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಹಲವಾರು ಕಾರಣಗಳಿಗಾಗಿ ಕಂಪನಿಗಳ ನೋಂದಣಿ ರದ್ದುಪಡಿಸುವ ಅಧಿಕಾರವನ್ನು ಕಂಪನಿ ಕಾಯ್ದೆಯ 248 ಸೆಕ್ಷನ್ ನೀಡುತ್ತದೆ.

ಎರಡು ಅಥವಾ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಹಣಕಾಸಿನ ವಾರ್ಷಿಕ ಲೆಕ್ಕಪತ್ರ ವಿವರ ಸಲ್ಲಿಸದ 2.26 ಲಕ್ಷ ಕಂಪನಿಗಳ ನೋಂದಣಿಯನ್ನು ಕಂಪನಿ ವ್ಯವಹಾರಗಳ ಸಚಿವಾಲಯವು ಈಗಾಗಲೇ ರದ್ದುಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.