ನವದೆಹಲಿ: ಅಕ್ಕಿ ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಮಳೆ ಪ್ರಮಾಣ ವಾಡಿಕೆಗಿಂತಲೂ ಕಡಿಮೆ ಆಗಿದೆ. ಹೀಗಾಗಿ 2023–24ರ ಬೆಳೆ ವರ್ಷದ ಮುಂಗಾರು ಅವಧಿಯಲ್ಲಿ ಅಕ್ಕಿ ಉತ್ಪಾದನೆಯು ಶೇ 3.79ರಷ್ಟು ಕಡಿಮೆ ಆಗುವ ಅಂದಾಜು ಮಾಡಲಾಗಿದೆ ಎಂದು ಕೃಷಿ ಸಚಿವಾಲಯ ಹೇಳಿದೆ.

2022–23ರ ಬೆಳೆ ವರ್ಷದಲ್ಲಿ 11.05 ಕೋಟಿ ಟನ್ನಷ್ಟು ಅಕ್ಕಿ ಉತ್ಪಾದನೆ ಆಗಿತ್ತು. ಇದಕ್ಕೆ ಹೋಲಿಸಿದರೆ 2023–24ರ ಬೆಳೆ ವರ್ಷದಲ್ಲಿ ಉತ್ಪಾದನೆಯು 10.63 ಕೋಟಿ ಟನ್ಗೆ ಇಳಿಕೆ ಆಗಲಿದೆ ಎಂದು ತಿಳಿಸಿದೆ.

ಆಹಾರಧಾನ್ಯಗಳ ಉತ್ಪಾದನೆಯ ಮೊದಲ ಅಂದಾಜನ್ನು ಸಚಿವಾಲಯ ಬಿಡುಗಡೆ ಮಾಡಿದೆ. ಅದರಂತೆ ಮೆಕ್ಕೆ ಜೋಳದ ಉತ್ಪಾದನೆಯು 2.36 ಕೋಟಿ ಟನ್ನಿಂದ 2.24 ಕೋಟಿ ಟನ್ಗೆ ಇಳಿಕೆ ಕಾಣಲಿದೆ.

ತೊಗರಿ ಉತ್ಪಾದನೆಯು 33.1 ಲಕ್ಷ ಟನ್ನಿಂದ 34.2 ಲಕ್ಷ ಟನ್ಗೆ ಅಲ್ಪ ಹೆಚ್ಚಳ ಆಗುವ ನಿರೀಕ್ಷೆ ಮಾಡಲಾಗಿದೆ. ಹೆಸರು ಕಾಳು ಉತ್ಪಾದನೆ 17.1 ಲಕ್ಷ ಟನ್ನಿಂದ 14 ಲಕ್ಷ ಟನ್ಗೆ ಇಳಿಕೆ ಆಗಲಿದೆ. ಎಣ್ಣೆಕಾಳುಗಳ ಉತ್ಪಾದನೆಯು 2.61 ಕೋಟಿ ಟನ್ನಿಂದ 2.15 ಕೋಟಿ ಟನ್ಗೆ ಇಳಿಕೆ ಕಾಣಲಿದೆ. ಕಬ್ಬು ಉತ್ಪಾದನೆಯು 49.05 ಕೋಟಿ ಟನ್ನಿಂದ 43.47 ಕೋಟಿ ಟನ್ಗೆ ಇಳಿಕೆ ಕಾಣುವ ಅಂದಾಜು ಮಾಡಿರುವುದಾಗಿ ಹೇಳಿದೆ.

ಆಹಾರಧಾನ್ಯಗಳ ಒಟ್ಟು ಉತ್ಪಾದನೆಯು ಈ ಮುಂಗಾರು ಅವಧಿಯಲ್ಲಿ 14.85 ಕೋಟಿ ಟನ್ ಆಗುವ ಅಂದಾಜು ಮಾಡಲಾಗಿದೆ. ಹಿಂದಿನ ವರ್ಷದ ಮುಂಗಾರಿನಲ್ಲಿ 15.57 ಕೋಟಿ ಟನ್ನಷ್ಟು ಉತ್ಪಾದನೆ ಆಗಿತ್ತು ಎಂದು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.