ಬ್ಯಾಡಗಿ (ಹಾವೇರಿ ಜಿಲ್ಲೆ): ‘ಡಬ್ಬಿ ಮೆಣಸಿನಕಾಯಿ, ಕ್ವಿಂಟಲ್‌ಗೆ ಗರಿಷ್ಠ ₹ 26,099ಕ್ಕೆ ಮಾರಾಟವಾಗಿದೆ. ಇದು ಮಾರುಕಟ್ಟೆ ಇತಿಹಾಸದಲ್ಲೇ ಅತಿ ಹೆಚ್ಚಿನ ದರವಾಗಿದೆ’ ಎಂದು ಎಪಿಎಂಸಿ ಹೇಳಿದೆ.

ಇಲ್ಲಿಯ ಅಂತರರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ 49,908 ಚೀಲ ಒಣ ಮೆಣಸಿನಕಾಯಿ ಆವಕವಾಗಿದೆ. ಇದರಲ್ಲಿ ಶೇ 20ರಷ್ಟು ಡಬ್ಬಿ ಮೆಣಸಿನಕಾಯಿ ಇದೆ. ಪ್ರಸಕ್ತ ಹಂಗಾಮು ಆರಂಭವಾದ ಬಳಿಕ ಆವಕದಲ್ಲಿ ಚೇತರಿಕೆ ಕಂಡಿದೆ.ಕಳೆದ ವರ್ಷ ಡಿಸೆಂಬರ್‌ನಲ್ಲಿ ಕ್ವಿಂಟಲ್‌ಗೆ ಗರಿಷ್ಠ ದರ ₹15,599 ಇತ್ತು. ಮಳೆಯಿಂದ ಬೆಳೆ ಹಾಳಾಗಿದ್ದು, ದರ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

‘ಬ್ಯಾಡಗಿ ತಳಿ ಹೋಲುವ ಸಿಂಜೆಂಟಾ ಸೀಡ್ ಮಾದರಿಯ ಮೆಣಸಿನಕಾಯಿ ಮಾತ್ರ ಹೆಚ್ಚಿಗೆ ಮಾರುಕಟ್ಟೆಗೆ ಬರುತ್ತಿದೆ. ಇದನ್ನು ಬಳ್ಳಾರಿ, ರಾಯಚೂರು, ಕಲಬುರ್ಗಿ, ಶಹಾಪುರ, ಸುರಪುರ ಹಾಗೂ ಆಂಧ್ರದ ಗಡಿ ಭಾಗದಲ್ಲಿ ಬೆಳೆಯಲಾಗುತ್ತದೆ’ ಎಂದು ವರ್ತಕರ ಸಂಘದ ಜಂಟಿ ಕಾರ್ಯದರ್ಶಿ ವಿ.ಎಸ್.ಮೋರಿಗೇರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.