ನವದೆಹಲಿ: 2022ನೇ ಸಾಲಿನ ಹಣಕಾಸು ವರ್ಷದಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳಿಗೆ 67.76 ಕೋಟಿ ಟನ್ ಕಲ್ಲಿದ್ದಲು ಪೂರೈಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪೂರೈಕೆ ಪ್ರಮಾಣ ಶೇ 25ರಷ್ಟು ಹೆಚ್ಚಾಗಿದೆ ಎಂದುಸರ್ಕಾರದ ಅಂಕಿ–ಅಂಶಗಳು ತಿಳಿಸಿವೆ.

ಕಲ್ಲಿದ್ದಲು ಪೂರೈಕೆಯಲ್ಲಿ ಏರಿಕೆಯಾಗಿರುವುದರ ಹೊರತಾಗಿಯೂ, ವಿದ್ಯುತ್ ಬೇಡಿಕೆ ಸಹ ಹೆಚ್ಚುತ್ತಿರುವುದರಿಂದ ಹಲವು ಥರ್ಮಲ್ (ಉಷ್ಣ) ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಇಂಧನ ಕೊರತೆ ಎದುರಾಗಿರುವ ಬಗ್ಗೆ ವರದಿಗಳಾಗಿವೆ.

2021ರ ಆರ್ಥಿಕ ವರ್ಷದಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳಿಗೆ 54.40 ಕೋಟಿ ಟನ್ ಕಲ್ಲಿದ್ದಲು ಪೂರೈಕೆಯಾಗಿತ್ತು. ಇದು 2020ರಲ್ಲಿ ಪೂರೈಕೆಯಾಗಿದ್ದ (56.72 ಕೋಟಿ ಟನ್) ಪ್ರಮಾಣಕ್ಕಿಂತಲೂ ಕಡಿಮೆ ಇತ್ತು.

2020ರ ಹಣಕಾಸು ವರ್ಷದಲ್ಲಿ ಪೂರೈಕೆಯಾಗಿದ್ದ56.72 ಕೋಟಿ ಟನ್ ಕಲ್ಲಿದ್ದಲು ಪ್ರಮಾಣಕ್ಕೆ ಹೋಲಿಸಿದರೆ, ಸದ್ಯದ ಹಣಕಾಸು ವರ್ಷದಲ್ಲಿ ಶೇ 19.47ರಷ್ಟು ಅಧಿಕ ಪೂರೈಕೆಯಾಗಿದೆ. ಇದರೊಂದಿಗೆ ಒಟ್ಟು ಕಲ್ಲಿದ್ದಲು ಪೂರೈಕೆ67.76 ಕೋಟಿ ಟನ್‌ಗೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ವಿದ್ಯುತ್ ಉತ್ಪಾದನಾ ಘಟಕಗಳಿಗೆಕಳೆದ ತಿಂಗಳು6.53 ಕೊಟಿ ಟನ್ ಕಲ್ಲಿದ್ದಲು ವಿತರಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿಈ ಪ್ರಮಾಣ5.79 ಕೋಟಿ ಟನ್ ನಷ್ಟಿತ್ತು.ಒಟ್ಟಾರೆ ಕಲ್ಲಿದ್ದಲು ಪೂರೈಕೆ ಪ್ರಮಾಣ 2022ರ ಹಣಕಾಸು ವರ್ಷದಲ್ಲಿ 81.81 ಕೋಟಿ ಟನ್‌ಗೆ ಏರಿಕೆಯಾಗಿದೆ. ಇದು 2021ರ ಹಣಕಾಸು ವರ್ಷದಲ್ಲಿ69.13 ಕೋಟಿ ಟನ್‌ನಷ್ಟಿತ್ತು ಎನ್ನಲಾಗಿದೆ.

ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಇಂಧನದ ಬೇಡಿಕೆ ಹೆಚ್ಚಾಗಲಿರುವುದರಿಂದ, ಕಲ್ಲಿದ್ದಲು ಹಂಚಿಕೆದಾರರು ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಿಕೊಳ್ಳುವ ಸುವರ್ಣಾವಕಾಶ ಹೊಂದಿದ್ದಾರೆ ಎಂದು ಕಲ್ಲಿದ್ದಲು ಕಾರ್ಯದರ್ಶಿ ಎ.ಕೆ.ಜೈನ್ ಈ ಹಿಂದೆ ಹೇಳಿದ್ದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಲವು ರಾಜ್ಯಗಳ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಬಗ್ಗೆ ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.