ನವದೆಹಲಿ: ಇನ್ಫೊಸಿಸ್ ಕಂಪನಿಯು ಹೆಲ್ತ್‌ಕೇರ್ ಇನ್ಶೂರೆನ್ಸ್ ಸಾಫ್ಟ್‌ವೇರ್‌ಗೆ ಸಂಬಂಧಿಸಿದ ಮಾಹಿತಿ ಹಾಗೂ ವ್ಯಾಪಾರ ರಹಸ್ಯಗಳನ್ನು ಕಳವು ಮಾಡಿದೆ ಎಂದು ಐ.ಟಿ ಕಂಪನಿ ಕಾಗ್ನಿಜೆಂಟ್‌ನ ಅಂಗಸಂಸ್ಥೆಯಾದ ಟ್ರೈಝೆಟ್ಟೊ ಆರೋಪಿಸಿದ್ದು, ಈ ಸಂಬಂಧ ಅಮೆರಿಕದ ಫೆಡರಲ್ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದೆ.

ಈ ಆರೋಪವನ್ನು ಇನ್ಫೊಸಿಸ್ ನಿರಾಕರಿಸಿದ್ದು, ‘ಕೋರ್ಟ್‌ನಲ್ಲಿ ದಾಖಲಾಗಿರುವ ಮೊಕದ್ದಮೆ ಬಗ್ಗೆ ಅರಿವಿದೆ. ನ್ಯಾಯಾಲಯದಲ್ಲಿಯೇ ಇದಕ್ಕೆ ಸೂಕ್ತ ಸಮರ್ಥನೆ ನೀಡಲಾಗುವುದು’ ಎಂದು ತಿಳಿಸಿದೆ.

ಟ್ರೈಝೆಟ್ಟೊ ಕಂಪನಿಯು ಆರೋಗ್ಯ ವಿಮಾದಾರರಿಗೆ ಸೌಲಭ್ಯ ಒದಗಿಸಲು ಫೆಸೆಕ್ಸ್ಟ್ ಮತ್ತು ಕ್ಯೂಎನ್‌ಎಕ್ಸ್‌ಟಿ ಎಂಬ ಸಾಫ್ಟ್‌ವೇರ್ ಬಳಸುತ್ತಿದೆ. ಇನ್ಫೊಸಿಸ್ ಅಕ್ರಮವಾಗಿ ಈ ಸಾಫ್ಟ್‌ವೇರ್‌ನ ದತ್ತಾಂಶವನ್ನು ಕಳವು ಮಾಡಿದೆ. ಅಲ್ಲದೆ, ತನ್ನದೆ ಆದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲು ಈ ದತ್ತಾಂಶವನ್ನು ಬಳಸಿಕೊಂಡಿದೆ. ಹಾಗಾಗಿ, ಇದು ವ್ಯಾಪಾರ ರಹಸ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಟೆಕ್ಸಾಸ್ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಕಾಗ್ನಿಜೆಂಟ್ ವಿವರಿಸಿದೆ.

ಇತ್ತೀಚೆಗೆ ಇನ್ಫೊಸಿಸ್‌ನ ಕಾರ್ಯ ನಿರ್ವಾಹಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ರಾಜೇಶ್ ವಾರಿಯರ್ ಅವರು, ಕಾಗ್ನಿಜೆಂಟ್‌ನ ಜಾಗತಿಕ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಅಲ್ಲದೆ, ಭಾರತದ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಜವಾಬ್ದಾರಿಯನ್ನೂ ಅವರಿಗೆ ನೀಡಲಾಗಿದೆ.

ಕಾಗ್ನಿಜೆಂಟ್‌ನ ಸಿಇಒ ಆಗಿರುವ ರವಿಕುಮಾರ್ ಎಸ್. ಅವರು 20 ವರ್ಷ ಕಾಲ ಇನ್ಫೊಸಿಸ್‌ನಲ್ಲಿ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2016ರ ಜನವರಿಯಿಂದ 2022ರ ಅಕ್ಟೋಬರ್‌ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.