ನವದೆಹಲಿ: ಗೂಗಲ್ ಪೇ ಆ್ಯಪ್ ಬಳಕೆದಾರರು ಇನ್ನು ಮುಂದೆ ಚಿನ್ನ ಖರೀದಿ ಮತ್ತು ಮಾರಾಟ ವಹಿವಾಟು ನಡೆಸಬಹುದು.

ಚಿನ್ನ ಶುದ್ಧೀಕರಣ ಸಂಸ್ಥೆ ‘ಎಂಎಂಟಿಸಿ–ಪಿಎಎಂಪಿ ಇಂಡಿಯಾ’ ಜತೆಗಿನ ಪಾಲುದಾರಿಕೆಯಲ್ಲಿ ಈ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ತಂತ್ರಜ್ಞಾನ ದೈತ್ಯ ಸಂಸ್ಥೆ ಗೂಗಲ್ ತಿಳಿಸಿದೆ. .

ಕೇಂದ್ರೀಯ ಬ್ಯಾಂಕ್ನ ಅನುಮತಿ ಇಲ್ಲದೆಯೇ ಗೂಗಲ್ ಪೇ ಹಣಕಾಸು ವಹಿವಾಟು ನಡೆಸುತ್ತಿರುವುದಕ್ಕೆ ಏನು ಕಾರಣ ಎಂದು ದೆಹಲಿ ಹೈಕೋರ್ಟ್ ಭಾರತೀಯ ರಿಸರ್ವ್ ಬ್ಯಾಂಕ್ಗೆ ಬುಧವಾರವಷ್ಟೇ ಕೇಳಿತ್ತು.

ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಲು ಕೋರ್ಟ್, ಆರ್ಬಿಐ ಮತ್ತು ಗೂಗಲ್ ಇಂಡಿಯಾಕ್ಕೆ ನೋಟಿಸ್ ನೀಡಿದೆ. ತನ್ನ ಪಾಲುದಾರ ಬ್ಯಾಂಕ್ಗಳಿಗೆ ಗೂಗಲ್ ಪೇ ತಂತ್ರಜ್ಞಾನ ಸೇವೆ ಒದಗಿಸುವ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ‘ಯುಪಿಐ’ ಮೂಲಕ ಹಣ ಪಾವತಿಗೆ ಅನುಮತಿ ನೀಡಿದೆಯಷ್ಟೆ. ಪಾವತಿ ಪ್ರಕ್ರಿಯೆಯ ಭಾಗವಾಗಿಲ್ಲ. ಸದ್ಯದ ನಿಯಮಗಳ ಅನುಸಾರ ಈ ಸೇವೆಗೆ ಲೈಸನ್ಸ್ ಪಡೆಯುವ ಅಗತ್ಯ ಇಲ್ಲ ಎಂದು ಸಂಸ್ಥೆಯ ವಕ್ತಾರ ತಿಳಿಸಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.