ನವದೆಹಲಿ: ಕ್ರಿಪ್ಟೊ ಕರೆನ್ಸಿಗಳ ವಿಚಾರವಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯು ‘ಕ್ರಿಪ್ಟೊ ಕರೆನ್ಸಿಗಳನ್ನು ಮೇಲ್ನೋಟಕ್ಕೆ ನ್ಯಾಯಬದ್ಧಗೊಳಿಸುತ್ತಲೇ, ಅವುಗಳ ಮೇಲೆ ಹೆಚ್ಚಿನ ಕಣ್ಗಾವಲು ಇರಿಸಲು ಸರ್ಕಾರಕ್ಕೆ ಅವಕಾಶ ಕೊಡುತ್ತದೆ’ ಎಂದು ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಹೇಳಿದ್ದಾರೆ.

‘ಕ್ರಿಪ್ಟೊ ಕರೆನ್ಸಿಗಳ ಮೂಲಕ ನಡೆಯುವ ಎಲ್ಲ ವಹಿವಾಟುಗಳ ಮಾಹಿತಿ ಹೊಂದಲು ಇದು ಸರ್ಕಾರಕ್ಕೆ ಅವಕಾಶ ಕೊಡಲಿದೆ’ ಎಂದು ಅವರು ಹೇಳಿದ್ದಾರೆ.

ಪಿಟಿಐ ವರದಿ: ಕೇಂದ್ರದ ಕ್ರಮವನ್ನು ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರಗಳು ಸ್ವಾಗತಿಸಿವೆ. ‘ನಿಧಾನವಾಗಿಯಾದರೂ ನಾವು ಕಾನೂನಿನ ಅಡಿ ನಿಯಂತ್ರಿತವಾಗಿರುವ ಕ್ರಿಪ್ಟೊ ವ್ಯವಸ್ಥೆಯತ್ತ ಸಾಗುತ್ತಿದ್ದೇವೆ’ ಎಂದು ಕಾಯಿನ್‌ಡಿಸಿಎಕ್ಸ್ ಕಂಪನಿಯ ಸಿಇಒ ಸುಮಿತ್ ಗುಪ್ತ ಹೇಳಿದ್ದಾರೆ.

ಇನ್ನು ಮುಂದೆ, ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರಗಳು ಹಾಗೂ ಡಿಜಿಟಲ್ ಆಸ್ತಿಯನ್ನು ನಿರ್ವಹಿಸುವ ಮಧ್ಯವರ್ತಿಗಳು ತಮ್ಮ ಗ್ರಾಹಕರ ಕೆವೈಸಿ ಪ್ರಕ್ರಿಯೆ ನಡೆಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.