ವಾಲ್‍ಮಾರ್ಟ್ ಇಂಡಿಯಾ, ಭಾರತದಲ್ಲಿ ರಿಟೇಲ್ ವ್ಯಾಪಾರವು ಉತ್ತಮ ಬೆಳವಣಿಗೆ ಕಾಣಲು ಭದ್ರ ಅಡಿಪಾಯಹಾಕಿದೆ. 2009 ರಲ್ಲಿ ಮೊದಲ ಕ್ಯಾಷ್ ಆ್ಯಂಡ್ ಕ್ಯಾರಿ ಮಳಿಗೆ ಆರಂಭ ಮಾಡುವ ಮೂಲಕ ವಾಲ್‍ಮಾರ್ಟ್ ಇಂಡಿಯಾ ಲಕ್ಷಾಂತರ ಸದಸ್ಯರಿಗೆ ಸೇವೆ ಒದಗಿಸುತ್ತಾ ಬಂದಿದೆ. ಪ್ರಮುಖವಾಗಿ ಕಿರಾಣಿಗಳಿಗೆ ಮತ್ತು ಇನ್ನಿತರ ಸಣ್ಣ ಪ್ರಮಾಣದ ವ್ಯವಹಾರಸ್ಥರಿಗೆ ಹೆಚ್ಚಿನ ಉಪಯೋಗ ಮಾಡಿಕೊಟ್ಟಿದೆ. ತನ್ನ ಸದಸ್ಯರಿಗೆ, ಸಣ್ಣ ರೈತರಿಗೆ, ಸ್ಥಳೀಯ ಮತ್ತು ಪ್ರಾದೇಶಿಕ ಪೂರೈಕೆದಾರರು, ಮಹಿಳಾ ವ್ಯವಹಾರಸ್ಥರಿಗೆ, ಸಂಘಸಂಸ್ಥೆಗಳಿಗೆ ತಮ್ಮ ವ್ಯವಹಾರಗಳನ್ನು ಮೌಲ್ಯವರ್ಧಿತವನ್ನಾಗಿ ಮಾಡಿಕೊಳ್ಳುವಂತೆ ಮಾಡುವಲ್ಲಿ ವಾಲ್‍ಮಾರ್ಟ್ ಪ್ರಮುಖ ಪಾತ್ರ ವಹಿಸಿದೆ.

ಇದೀಗ ವಾಲ್‍ಮಾರ್ಟ್ ಮತ್ತು ಫ್ಲಿಪ್‍ಕಾರ್ಟ್ ಸಹಭಾಗಿತ್ವ ಘೋಷಿಸಲಾಗಿದ್ದು, ಗ್ರಾಹಕರ ವ್ಯವಹಾರವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ. ಈ ಒಪ್ಪಂದವು ಗ್ರಾಹಕರ ವ್ಯವಹಾರವನ್ನು ವೃದ್ಧಿ ಮಾಡುವುದರ ಜೊತೆಗೆ ಸ್ಥಳೀಯ ಸಮುದಾಯದ ಬೆಳವಣಿಗೆಗೆ ಸಹಕಾರಿಯಾಗಿದೆ. ಇದಲ್ಲದೇ, ಸರ್ಕಾರದ ‘ಭಾರತದಲ್ಲಿಯೇ ತಯಾರಿಸಿ’ ಮತ್ತು ‘ಡಿಜಿಟಲ್ ಇಂಡಿಯಾ’ ಪರಿಕಲ್ಪನೆಯ ಯೋಜನೆಗಳಿಗೆ ಪೂರಕವಾಗಿದೆ.

ಮಾರುಕಟ್ಟೆಯಲ್ಲಿ ವ್ಯಾಪಕ ಬದಲಾವಣೆ ಆಗುತ್ತಿರುವ ಈ ಸಂದರ್ಭದಲ್ಲಿ ಈ ಒಪ್ಪಂದವು ಪ್ರಮುಖ ಪಾತ್ರ ವಹಿಸುತ್ತದೆ. ಇ-ಕಾಮರ್ಸ್‌ನಿಂದಾಗಿ ಸರಕು ಮತ್ತು ಸೇವೆಗಳ ವಹಿವಾಟು ಗಮನಾರ್ಹ ಬೆಳವಣಿಗೆ ಕಾಣುತ್ತಿದೆ.

ವಾಲ್‍ಮಾರ್ಟ್ ಮತ್ತು ಫ್ಲಿಪ್‍ಕಾರ್ಟ್ ಸಂಸ್ಥೆಗಳು ಒಗ್ಗೂಡಿ ದೇಶದಲ್ಲಿ ಉದ್ಯೋಗ ಸೃಷ್ಟಿ, ಸಣ್ಣ ವ್ಯವಹಾರಗಳ ಪ್ರಗತಿ, ಗ್ರಾಮೀಣ ರೈತರಿಗೆ ಮಾರುಕಟ್ಟೆ ವಿಸ್ತರಣೆ ಮತ್ತು ಮಹಿಳಾ ಉದ್ಯಮಿಗಳಿಗೆ ಅತ್ಯುತ್ತಮವಾದ ರೀತಿಯಲ್ಲಿ ವ್ಯವಹಾರ ನಡೆಸಿಕೊಂಡು ಹೋಗಲು ವಿಪುಲವಾದ ಅವಕಾಶಗಳನ್ನು ಮಾಡಿಕೊಡಲಿವೆ.

ಫ್ಲಿಪ್‍ಕಾರ್ಟ್‌ನಲ್ಲಿ ಹೂಡಿಕೆ ಮಾಡುವ ಮೂಲಕ ವಾಲ್‍ಮಾರ್ಟ್, ವ್ಯಾಪಾರದ ಪಾಲು ಹಂಚಿಕೆಯೊಂದಿಗೆ ಭವಿಷ್ಯದಲ್ಲಿನ ಪಾಲು ಹಂಚಿಕೆಗೂ ಒತ್ತು ನೀಡುತ್ತಿದೆ. ಫ್ಲಿಪ್‍ಕಾರ್ಟ್‍ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ನಾವು ಕಿರಾಣಿ ಅಂಗಡಿಗಳು ಆಧುನಿಕ ವ್ಯವಹಾರಗಳನ್ನು ನಡೆಸಲು ಅವಕಾಶ ಕಲ್ಪಿಸುತ್ತಿದ್ದೇವೆ. ರಿಟೇಲ್ ಕ್ಷೇತ್ರದಲ್ಲಿ ಅತ್ಯುತ್ತಮವಾದ ತಂತ್ರಜ್ಞಾನ ಅಳವಡಿಸಿಕೊಂಡು ಸರಕುಗಳ ಪೂರೈಕೆ ವ್ಯವಸ್ಥೆಯನ್ನು ಸದೃಢಗೊಳಿಸಲು ಬದ್ಧರಾಗಿದ್ದೇವೆ.

ಕೃಷಿ ಉತ್ಪನ್ನಗಳ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುವ ಮೂಲಕ ನಾವು ಗ್ರಾಮೀಣ ರೈತರಿಗೆ ಆದಾಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ಕೃಷಿ ಪದ್ಧತಿಯಲ್ಲಿನ ಸುಧಾರಣೆ, ಮಾರುಕಟ್ಟೆ ವಿಸ್ತರಣೆ ಮತ್ತು ಆಹಾರ ವ್ಯರ್ಥವಾಗುವ ಪ್ರಮಾಣ ಕಡಿಮೆಯಾಗುವುದು ಸೇರಿದಂತೆ ಇನ್ನಿತರ ಅಂಶಗಳಿಂದ ರೈತರ ಬಾಳನ್ನು ಹಸನುಮಾಡಲು ವಾಲ್‍ಮಾರ್ಟ್ ಇಂಡಿಯಾ ಮತ್ತು ಫ್ಲಿಪ್‍ಕಾರ್ಟ್ ಜಂಟಿಯಾಗಿ ಕಾರ್ಯಯೋಜನೆಗಳನ್ನು ರೂಪಿಸಿವೆ.

ಆರ್ಥಿಕ ಪ್ರಗತಿಗೆ ಸದೃಢ ಸ್ವರೂಪದ ಸರಣಿ ಪೂರೈಕೆ ವ್ಯವಸ್ಥೆ ಅಗತ್ಯವಾಗಿದೆ. ಆಹಾರ ಪದಾರ್ಥಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂರಕ್ಷಣೆ ಮಾಡಲೆಂದೇ ಈ ಎರಡೂ ಸಂಸ್ಥೆಗಳು ಬಂಡವಾಳ ಹೂಡಿಕೆ ಮಾಡುವ ಮೂಲಕ ಆಹಾರ ಪದಾರ್ಥಗಳು ನಷ್ಟವಾಗದ ಅಥವಾ ಹಾನಿಯಾಗದಂತೆ ನೋಡಿಕೊಳ್ಳಲಿವೆ. ಈ ಬಂಡವಾಳ ಹೂಡಿಕೆಯಿಂದಾಗಿ ರಫ್ತು ಮಾರುಕಟ್ಟೆಯಲ್ಲಿ ಭಾರತ ಅತ್ಯುತ್ತಮ ಸ್ಥಾನದಲ್ಲಿ ನಿಲ್ಲುವಂತೆ ಮಾಡಲಿದೆ. ಸುಧಾರಿತ ಸಂಗ್ರಹಣಾ ಸಾಮರ್ಥ್ಯ ಮತ್ತು ವ್ಯವಸ್ಥಿತ ಸರಕು ಪೂರೈಕೆ ಮೂಲಕ ಭಾರತದ ಉತ್ಪನ್ನಗಳನ್ನು ವಿಶ್ವದಾದ್ಯಂತ ಇರುವ ವಾಲ್‍ಮಾರ್ಟ್ ಮಾರುಕಟ್ಟೆಗೆ ರಫ್ತು ಮಾಡಲಿವೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತೀಯ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗಲಿದೆ.

ಸದಸ್ಯರ ವ್ಯವಹಾರ ವೃದ್ಧಿಗೆ ಕೊಡುಗೆ
ವಾಲ್‍ಮಾರ್ಟ್ ಇಂಡಿಯಾ, ತನ್ನ ಸದಸ್ಯರ ವ್ಯವಹಾರ ವೃದ್ಧಿಗೆ ಸಾಕಷ್ಟು ವಿಧದಲ್ಲಿ ಕೊಡುಗೆ ನೀಡುತ್ತಿದೆ. ಆಧುನಿಕ ಶೈಲಿ ರಿಟೇಲ್ ವ್ಯಾಪಾರದ ಯಶಸ್ಸಿಗೆ ಪೂರಕವಾಗಿ ಮಳಿಗೆಯ ವಿನ್ಯಾಸ, ಸ್ಥಳ, ಗರಿಷ್ಠ ಮಾರಾಟದ ಲಾಭ ಪಡೆಯುವ ಬಗೆ, ಪಾವತಿ ಸೇವೆ, ಗ್ರಾಹಕ ಸೇವೆ, ವಿತರಣಾ ವ್ಯವಸ್ಥೆ ಸೇರಿದಂತೆ ಮತ್ತಿತರ ವಿಚಾರದಲ್ಲಿ ನೆರವಾಗುತ್ತಿದೆ. ವಾಲ್‍ಮಾರ್ಟ್‍ಗೆ ತರಕಾರಿ ಪೂರೈಕೆ ಮಾಡುವವರಿಗೆ ಆಹಾರ ಸುರಕ್ಷತೆ, ಸುರಕ್ಷಿತ ಪ್ಯಾಕ್ ಮಾಡಿ ಪೂರೈಕೆ ಮಾಡುವುದರ ಕುರಿತು ಮಾರ್ಗದರ್ಶನ ನೀಡುತ್ತಿದೆ.

ಅಂತಿಮವಾಗಿ ವಾಲ್‍ಮಾರ್ಟ್ ಇಂಡಿಯಾ ಮತ್ತು ಫ್ಲಿಪ್‍ಕಾರ್ಟ್, ರಿಟೇಲ್ ವಹಿವಾಟಿನಲ್ಲಿ ತೊಡಗಿರುವವರಿಗೆ ಲಾಭವಾಗುವ ರೀತಿಯಲ್ಲಿ ನೆರವಾಗಲಿವೆ. ವಾಲ್‍ಮಾರ್ಟ್‍ನ ಸದಸ್ಯರು, ಸಹವರ್ತಿಗಳು, ರೈತರು, ಪೂರೈಕೆದಾರರು ಮತ್ತು ಸಮಾಜಕ್ಕೆ ಹೆಚ್ಚು ಲಾಭ ಆಗುವ ರೀತಿಯಲ್ಲಿ ಈ ಎರಡೂ ಸಂಸ್ಥೆಗಳು ಒಟ್ಟಾಗಿ ವ್ಯವಹಾರ ರೂಪಿಸಿವೆ. ಭಾರತದ ಭವಿಷ್ಯವು ಹಲವಾರು ಸಾಧ್ಯತೆಗಳ ಆಗರವಾಗಿರಲಿದೆ. . ಈ ಪಾಲುದಾರಿಕೆ ಮೂಲಕ ಇವೆರಡೂ ಸಂಸ್ಥೆಗಳು ಭಾರತದ ಆರ್ಥಿಕ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಲು ಬದ್ಧವಾಗಿವೆ.

(ಲೇಖಕ, ವಾಲ್‍ಮಾರ್ಟ್ ಇಂಡಿಯಾದ ಹಿರಿಯ ಉಪಾಧ್ಯಕ್ಷ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.