ನವದೆಹಲಿ: ದೇಶದಲ್ಲಿ 2023–24ನೇ ಆರ್ಥಿಕ ಸಾಲಿನಡಿ ಮಾರ್ಚ್ 17ರ ವರೆಗೆ ನೇರ ತೆರಿಗೆಯ ನಿವ್ವಳ ಸಂಗ್ರಹವು ₹18.90 ಲಕ್ಷ ಕೋಟಿಗೆ ಮುಟ್ಟಿದೆ ಎಂದು ಆದಾಯ ತೆರಿಗೆ ಇಲಾಖೆಯು ಮಂಗಳವಾರ ತಿಳಿಸಿದೆ.

ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ 19.88ರಷ್ಟು ಏರಿಕೆಯಾಗಿದೆ. ಒಟ್ಟು ₹18,90,259 ಕೋಟಿ ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ಕಂಪನಿಗಳ ವರಮಾನ ತೆರಿಗೆ (ಸಿಐಟಿ) ಹಾಗೂ ವೈಯಕ್ತಿಕ ಆದಾಯ ತೆರಿಗೆಯು (ಪಿಐಟಿ) ₹9,14,469 ಕೋಟಿ ಸಂಗ್ರಹವಾಗಿದೆ.

ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಮೊತ್ತ ₹9,72,224 ಕೋಟಿ ಆಗಿದೆ. ಇಲ್ಲಿಯವರೆಗೆ ₹3.37 ಲಕ್ಷ ಕೋಟಿಯನ್ನು ಮರುಪಾವತಿ (ರೀಫಂಡ್) ಮಾಡಲಾಗಿದೆ ಎಂದು ತಿಳಿಸಿದೆ.

2022–23ನೇ ಹಣಕಾಸು ವರ್ಷದಲ್ಲಿ ₹15,76,776 ಕೋಟಿ ತೆರಿಗೆ ಸಂಗ್ರಹಿಸಲಾಗಿತ್ತು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ.

ಕೇಂದ್ರ ಸರ್ಕಾರವು 2023–24ನೇ ಹಣಕಾಸು ವರ್ಷದಲ್ಲಿ ₹19.45 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಲು ಗುರಿಯನ್ನು ಪರಿಷ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.