ನವದೆಹಲಿ: 2023–24ರ ಹಣಕಾಸು ವರ್ಷದ ಫೆಬ್ರುವರಿ 10ರವರೆಗೆ ನೇರ ತೆರಿಗೆ ಸಂಗ್ರಹದಲ್ಲಿ ಶೇ 20ರಷ್ಟು ಏರಿಕೆಯಾಗಿದ್ದು, ಒಟ್ಟು ₹15.60 ಲಕ್ಷ ಕೋಟಿ ವರಮಾನ ಸಿಕ್ಕಿದೆ.

ಇದು ಪ್ರಸಕ್ತ ಪೂರ್ಣ ಹಣಕಾಸು ವರ್ಷದ ನೇರ ತೆರಿಗೆಗಳ ಪರಿಷ್ಕೃತ ಬಜೆಟ್ ಅಂದಾಜಿನ ಶೇ 80ರಷ್ಟು ಆಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ತಿಳಿಸಿದೆ.

2024ರ ಫೆಬ್ರುವರಿ 10ರವರೆಗಿನ ಒಟ್ಟು ನೇರ ತೆರಿಗೆ ಸಂಗ್ರಹವು ₹18.38 ಲಕ್ಷ ಕೋಟಿಯಾಗಿದ್ದು, ಇದು ಹಿಂದಿನ ಅವಧಿಯಲ್ಲಿನ ಒಟ್ಟು ಸಂಗ್ರಹಣೆಗಿಂತ ಶೇ 17.30ರಷ್ಟು ಹೆಚ್ಚು. ಈ ಮೊತ್ತದಲ್ಲಿ 2023ರ ಏಪ್ರಿಲ್ 1ರಿಂದ 2024ರ ಫೆಬ್ರುವರಿ 10ರವರೆಗೆ ₹2.77 ಲಕ್ಷ ಕೋಟಿ ಮರುಪಾವತಿ (ರಿಫಂಡ್) ಮಾಡಲಾಗಿದೆ. ಹೀಗಾಗಿ ಒಟ್ಟು ಸಂಗ್ರಹವು ₹15.60 ಲಕ್ಷ ಕೋಟಿ ಆಗಿದೆ.

ಕಾರ್ಪೊರೇಟ್ ಆದಾಯ ತೆರಿಗೆ (ಸಿಐಟಿ) ಹೆಚ್ಚಳ ದರವು ಶೇ 9.16ರಷ್ಟಿದ್ದರೆ, ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) ಏರಿಕೆ ದರವು ಶೇ 25.67 ಇದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.