ನವದೆಹಲಿ: ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಕಳೆದ ವರ್ಷದ ಜೂನ್ಗೆ ಹೋಲಿಸಿದರೆ ಈ ವರ್ಷದ ಜೂನ್ನಲ್ಲಿ ಶೇಕಡ 2ರಷ್ಟು ಏರಿಕೆ ಕಂಡಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್ಐಎಎಂ) ಮಾಹಿತಿ ನೀಡಿದೆ.

2022ರ ಜೂನ್ನಲ್ಲಿ 3.20 ಲಕ್ಷ ವಾಹನಗಳು ಮಾರಾಟ ಆಗಿದ್ದವು. ಮಾರಾಟವು ಈ ವರ್ಷದ ಜೂನ್ನಲ್ಲಿ 3.27 ಲಕ್ಷಕ್ಕೆ ಏರಿಕೆ ಕಂಡಿದೆ.

ದ್ವಿಚಕ್ರ ವಾಹನ ಮಾರಾಟವು ಶೇ 2ರಷ್ಟು ಹೆಚ್ಚಾಗಿ 13.30 ಲಕ್ಷಕ್ಕೆ ತಲುಪಿದೆ. ತ್ರಿಚಕ್ರ ವಾಹನ ಮಾರಾಟ 26,701ರಿಂದ 53,019ಕ್ಕೆ ಏರಿಕೆ ಕಂಡಿದೆ. ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನ ಮಾರಾಟ 9.95 ಲಕ್ಷದಷ್ಟು ಆಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 9ರಷ್ಟು ಏರಿಕೆ ಕಂಡಿದೆ.

ವಾಹನಗಳ ಒಟ್ಟು ಮಾರಾಟವು 49.35 ಲಕ್ಷದಿಂದ 54.98 ಲಕ್ಷಕ್ಕೆ ಏರಿಕೆ ಆಗಿದೆ. ಬಡ್ಡಿದರವು ಗರಿಷ್ಠ ಮಟ್ಟದಲ್ಲಿ ಇರುವುದು ಆತಂಕ ಮೂಡಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ವಿನೋದ್ ಅಗರ್ವಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.