ಬೆಂಗಳೂರು: ಡೊಮಿನೋಸ್ ಪಿಜ್ಜಾ ಕಂಪನಿಯು, ಬೆಂಗಳೂರಿನ ಕನ್ನಿಂಗ್ಹ್ಯಾಂ ರಸ್ತೆಯಲ್ಲಿ ತನ್ನ ಹೊಸ ಮಳಿಗೆ ಆರಂಭಿಸಿದ್ದು, ದೇಶದಲ್ಲಿ ಡೊಮಿನೋಸ್ ಮಳಿಗೆಗಳ ಸಂಖ್ಯೆ 2,000ಕ್ಕೇರಿದೆ.

ಕಂಪನಿಯು ಹೈ-ಸ್ಟ್ರೀಟ್ ಸ್ಟೋರ್ಗಳು, ಮಾಲ್ಗಳು, ಹೆದ್ದಾರಿಗಳು, ಕಾಲೇಜುಗಳು ಮತ್ತು ವಿಮಾನ ನಿಲ್ದಾಣದ ಟರ್ಮಿನಲ್ಗಳ ಬಳಿ ಮಳಿಗೆ ಆರಂಭಿಸಿದೆ. ಕೋವಿಡ್ ನಂತರ ಡೊಮಿನೋಸ್ ಪ್ರತಿ ಎರಡು ದಿನಗಳಿಗೊಮ್ಮೆ ಒಂದು ಹೊಸ ಮಳಿಗೆ ತೆರೆದಿದೆ.

ತನ್ನ ಗ್ರಾಹಕರಿಗೆ 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ವಿತರಣೆ ಮಾಡುವ ಮೂಲಕ ಉತ್ತಮ ರುಚಿ ಮತ್ತು ಸೇವೆಯನ್ನು ನೀಡುತ್ತದೆ. ವಿಶ್ವದಾದ್ಯಂತ 20,000ಕ್ಕೂ ಹೆಚ್ಚು ಮಳಿಗೆಗಳಿಗೆ ಎಂದು ಕಂಪನಿಯು ತಿಳಿಸಿದೆ.

ಡೊಮಿನೋಸ್ ಪಿಜ್ಜಾ ಇಂಡಿಯಾ 1996ರಲ್ಲಿ ನವದೆಹಲಿಯಲ್ಲಿ ತನ್ನ ಮೊದಲ ಮಳಿಗೆ ತೆರೆಯಿತು. ಪ್ರಸ್ತುತ 421 ನಗರಗಳಲ್ಲಿ 2,000 ಮಳಿಗೆಗಳಿದ್ದು, ವಾರ್ಷಿಕವಾಗಿ 20 ಕೋಟಿ ಪಿಜ್ಜಾಗಳನ್ನು ಪೂರೈಸುತ್ತಿದೆ. ಈ ಮೈಲುಗಲ್ಲನ್ನು ಸಾಧಿಸಿದ ಭಾರತದ ಮೊದಲ ಕ್ಯುಎಸ್ಆರ್ ಆಗಿದ್ದು, ಅಮೆರಿಕದ ಹೊರಗೆ ಡೊಮಿನೋಸ್ಗೆ ಭಾರತವು ನಂಬರ್ ಒನ್ ಮಾರುಕಟ್ಟೆಯಾಗಿದೆ.

ಸಸಾರಾಂ, ಸುಲ್ತಾನ್ಪುರ್, ಮಡಿಕೇರಿ, ಗಿರ್ದಿಹ್ ಮತ್ತು ಬಾರಾಮತಿಯಂತಹ ಹೊಸ ನಗರಗಳನ್ನು ಪ್ರವೇಶಿಸಿದ ಮೊದಲ ಅಂತರರಾಷ್ಟ್ರೀಯ ಕಂಪನಿ ಆಗಿದೆ.

‘2,000 ಮಳಿಗೆಗಳ ಮೈಲಿಗಲ್ಲನ್ನು ಸಾಧಿಸಿದ್ದಕ್ಕಾಗಿ ಡೊಮಿನೋಸ್ ಇಂಡಿಯಾ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಜಾಗತಿಕ ಡೊಮಿನೋಸ್ ನೆಟ್ವರ್ಕ್ನಲ್ಲಿ ಭಾರತವು ಅಮೆರಿಕ ಹೊರತುಪಡಿಸಿದರೆ ಅತಿದೊಡ್ಡ ಮಾರುಕಟ್ಟೆಯಾಗಿದೆ’ ಎಂದು ಡೊಮಿನೋಸ್ ಪಿಜ್ಜಾದ ಇಂಟರ್ನ್ಯಾಷನಲ್ನ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಆರ್ಟ್ ಡಿ. ಎಲಿಯಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.