ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯೋಗಿಗಳ ಸಂಖ್ಯೆ ಶೇ 3.31ರಷ್ಟು ಏರಿಕೆ: ಆರ್‌ಬಿಐ

Published : 8 ಜುಲೈ 2024, 14:20 IST
Last Updated : 8 ಜುಲೈ 2024, 14:20 IST
ಫಾಲೋ ಮಾಡಿ
Comments

ಮುಂಬೈ: ಕೃಷಿ, ವ್ಯಾಪಾರ ಮತ್ತು ಹಣಕಾಸು ಸೇವೆಗಳು ಸೇರಿದಂತೆ 27 ವಲಯಗಳಲ್ಲಿ ಉದ್ಯೋಗಿಗಳ ಸಂಖ್ಯೆ 2022–23ರ ಹಣಕಾಸು ವರ್ಷದಲ್ಲಿ 59.66 ಕೋಟಿ ಮುಟ್ಟಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೋಮವಾರ ಹೇಳಿದೆ.

2021–22ರ ಇದೇ ಅವಧಿಯಲ್ಲಿ ಈ ವಲಯದಲ್ಲಿ 57.75 ಕೋಟಿ ಉದ್ಯೋಗಿಗಳಿದ್ದರು. ಇದಕ್ಕೆ ಹೋಲಿಸಿದರೆ ಶೇ 3.31ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಕೆಎಲ್‌ಇಎಂಎಸ್‌ (ಬಂಡವಾಳ (ಕೆ), ಕಾರ್ಮಿಕ, ಇಂಧನ, ವಸ್ತು ಮತ್ತು ಸೇವೆಗಳು) ದತ್ತಾಂಶವನ್ನು ಆರ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್‌ ಮಾಡಿದೆ. ನಿರ್ಮಾಣ, ವ್ಯಾಪಾರ, ಸಾರಿಗೆ ಮತ್ತು ಸಂಗ್ರಹಣೆಯು ಪ್ರಮುಖ ಉದ್ಯೋಗ ಒದಗಿಸುವ ವಿಭಾಗಗಳಾಗಿವೆ ಎಂದು ಅಂಕಿ–ಅಂಶಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT